

ಮಮದಾಪುರ: ಗ್ರಾಮದಲ್ಲಿ ಪ್ರಥಮ ಬಾರಿಗೆ ಶ್ರೀ ಲ$್ಮದೇವಿ ಜಾತ್ರೋತ್ಸವ ಹಮ್ಮಿಕೊಂಡಿದ್ದು ಸಂತಸವಾಗಿದೆ. ಜಾತ್ರೆ, ಉತ್ಸವಗಳು ಭಾರತೀಯ ಸಂಸತಿ, ಪರಂಪರೆ ಹಾಗೂ ಧಾರ್ಮಿಕ ಜಾಗೃತಿ ಸಂದೇಶ ಸಾರುತ್ತಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಲ$್ಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧು&ಸಂತರು, ಸತ್ಪುರುಷರು ಹಾಗೂ ಶರಣರ ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ವಿವಿಧ ಕಾರ್ಯಕ್ರಮ: ಶ್ರೀ ಲ$್ಮದೇವಿ ಜಾತ್ರೆ ಅಂಗವಾಗಿ ಹೋಮ, ಪೂಜೆ ಜರಗಿದವು. ಲ$್ಮದೇವಿ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಯಿತು. ಮಹಿಳೆಯರ ಕುಂಭ, ಆರತಿ ಹಾಗೂ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಉಸ್ಕಿಹಾಳ ಮಹರ್ಷಿ ವಾಲ್ಮೀಕಿ ಪೀಠದ ಆತ್ಮಾನಂದ ಸ್ವಾಮೀಜಿ ಸ್ವಾಗತ ಮೆರವಣಿಗೆ ಜರುಗಿತು. ಜಾತ್ರಾ ಮಹೋತ್ಸವ ಕಮಿಟಿ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಮುದುಕಪ್ಪ ಮಲ್ಲಾಡಿ ಭಜನೆ ಕಾರ್ಯಕ್ರಮ ನೀಡಿದರು.
ಸ್ಥಳಿಯ ಚರಮೂರ್ತಿಶ್ವರ ಸ್ವಾಮೀಜಿ, ಶಾಂತಾರೂಢ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಪಂ ಸದಸ್ಯರಾದ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಮುಖಂಡರಾದ ಶಂಕರಗೌಡ ಪಾಟೀಲ, ಮಹಾದೇವ ಒಂಟಿ, ಅಶೋಕ ಹಟ್ಟಿ, ಸುರೇಶ ಮಾಳಗಿ ಹಾಗೂ ಜಾತ್ರಾ ಮಹೋತ್ಸವ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.