ಸಂಸತ್ ದಾಳಿ ಪ್ರಕರಣ: ಮೈಸೂರಿನಲ್ಲಿ ಚರ್ಚೆ ನಡೆಸಿದ್ದ ಮನೋರಂಜನ್, ಲಕ್ನೋದ ಸಾಗರ್ ಶರ್ಮ

Manoranjan d
Published on

ಮೈಸೂರು: ಸಂಸತ್ ಮೇಲಿನ ದಾಳಿ ಪ್ರಕರಣದ ಆರೋಪಿಗಳಾದ ನಗರದ ಮನೋರಂಜನ್ ಹಾಗೂ ಲಕ್ನೋದ ಸಾಗರ್ ಶರ್ಮ ನಗರದ ಹೋಟೆಲ್‌ವೊಂದರಲ್ಲಿ ಉಳಿದುಕೊಂಡು ಚರ್ಚೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಸಂಸತ್ ಮೇಲಿನ ದಾಳಿಗೂ ಮುನ್ನ ಸಾಗರ್ ಶರ್ಮ ಮೈಸೂರಿಗೆ ಆಗಮಿಸಿದ್ದ. ಸಾಗರ್ ಶರ್ಮನನ್ನು ವಿಜಯನಗರ 2ನೇ ಹಂತದಲ್ಲಿರುವ ತನ್ನ ಮನೆಗೆ ಮನೋರಂಜನ್ ಕರೆದುಕೊಂಡು ಹೋಗಿದ್ದ. ಆ ನಂತರ ಅವರಿಬ್ಬರು ನಗರದ ಹೋಟೆಲ್‌ವೊಂದರಲ್ಲಿ ರೂಂ ಪಡೆದು ತಂಗಿದ್ದರು.

ಮನೋರಂಜನ್‌ಗೆ ಹಣಕಾಸು ನೆರವು ನೀಡಿದ್ದ ಸ್ನೇಹಿತ ಸೂರಪ್ಪನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭ ಮನೋರಂಜನ್ ಹಾಗೂ ಸಾಗರ್ ಶರ್ಮ ಹೋಟೆಲ್‌ನಲ್ಲಿ ಉಳಿದುಕೊಂಡು ಮಾತುಕತೆ ನಡೆಸಿರುವ ಅಂಶ ಬೆಳಕಿಗೆ ಬಂದಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ದೆಹಲಿ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ನಗರದಲ್ಲಿ ಬೀಡುಬಿಟ್ಟು ಪ್ರಕರಣದ ಪ್ರತಿಯಂದು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net