ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿ ಮುಖ್ಯ ರಸ್ತೆಯ ಅಂಗಡಿಯೊಂದರ ಮಾಲೀಕ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಗೀರು ಹಾಕಿ ಹಾನಿ ಮಾಡಿದ್ದರು. ಕಾರು ಮಾಲೀಕ ಪೊಲೀಸ್ ಸಹಾಯವನ್ನು ಯಾಚಿಸಿದ್ದು, ಪಕ್ಕದ ಅಂಗಡಿಯ ಸಿಸಿ ಕ್ಯಾಮರಾ ಗಮನಿಸಿದಾಗ ಅಂಗಡಿ ಮಾಲೀಕನ ಕೃತ್ಯ ಪತ್ತೆಯಾಗಿದೆ. ಕಾರು ರಿಪೇರಿಗೆ ದುಬಾರಿ ವೆಚ್ಚ ಪಾವತಿಸುವಂತೆ ಅಂಗಡಿ ಮಾಲೀಕನಿಗೆ ಬೇಡಿಕೆ ಇಟ್ಟಿದ್ದು, ಕೊನೆಗೆ ೫ ಸಾವಿರ ರೂ. ಪಾವತಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.