

ಉಡುಪಿ: ಪರ್ಕಳ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಂಭ್ರಮದ ವಾತಾವರಣ. ಅಂದು 1992ರ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಆಗಮಿಸಿ 31 ವರ್ಷದ ಬಳಿಕ ಗುರುಗಳನ್ನು ಕಂಡು ಶಾಲಾ ದಿನಗಳನ್ನು ನೆನೆದು ಭಾವುಕರಾದ ಮಧುರ ಕ್ಷಣ.
92 ಸಾಲಿನ ವಿದ್ಯಾರ್ಥಿ ಸುರೇಂದ್ರ ನಾಯಕ್ ಧ್ವಜಾರೋಹಣಗೈದರು. ನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಚ್ ಚಂದ್ರಯ್ಯ ಆಚಾರ್ಯ, ರಂಗಪ್ಪ ನಾಯಕ್, ಶ್ರೀನಿವಾಸ್ ನಾಯಕ್, ಶಿವರಾಮ ಶೆಟ್ಟಿ, ವಾಸುದೇವ ಪ್ರಭು , ಗೀತಾ ಕೆ. ಭಟ್, ರಾಘವ ಸಿ.ಎಚ್ , ಶೇಖರ ಕುಲಾಲ್, ಸೂರ್ಯ ಕುಮಾರ್, ಗ್ರಹಪತಿ ಶಾಸ್ತ್ರಿ , ಯಶೋಧ, ವಸಂತಿ, ಪ್ರವಿಣ, ರಾಮಚಂದ್ರ, ಮಾಲಿನಿ, ಪ್ರಭಾಕರ ಪ್ರಭು, ಗಣೇಶ್ ಪಾಟೀಲ್, ಸಂಧ್ಯಾ ಪ್ರಭು, ಶಿವರಾಮ್ ನಾಯ್ಕ್ ಇವರನ್ನು ಗೌರವಿಸಲಾಯಿತು.
ಮಂಜುನಾಥ್ ಪ್ರಭು ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿಗಾರ್ ಪ್ರಸ್ತಾವನೆಗೈದರು. ದಿನೇಶ್ ಪೂಜಾರಿ, ಪ್ರಕಾಶ್ ನಾಯಕ್, ಹರೀಶ್ ಭಂಡಾರಿ, ಶ್ರೀನಾಥ್ ಕಾಮತ್, ಹರೀಶ್ ಪೂಜಾರಿ, ರಜನಿ ನಾಯಕ್, ನಾಗವೇಣಿ, ಲೀಲಾಕ್ಷಿ ಗುರುಗಳನ್ನು ಪರಿಚಯಿಸಿದರು. ಶಿಕ್ಷಕೇತರ ಸಿಬ್ಬಂದಿ ನಾರಾಯಣ ನಾಯಕ್, ಚಂದ್ರ ನಾಯಕ್ , ಅಪ್ಪು , ರಾಮಚಂದ್ರ ನಾಯಕ್ ಇವರನ್ನು ಅಭಿನಂದಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕ ದಿನೇಶ್ ಹೆಗ್ಡೆ, ಕನ್ನಡ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಆನಂದ ನಾಯ್ಕ್ , ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕ ಸುಜಾತಾ ಈ ಉಪಸ್ಥಿತರಿದ್ದರು.
ಶಾಲೆಗೆ ಶಾಶ್ವತ ಕೊಡುಗೆಯಾಗಿ ಸಿ ಸಿ ಕ್ಯಾಮರಾಕ್ಕೆ ಟೆಲಿವಿಷನ್ ಮತ್ತು 3 ಶಾಲಾ ಕೊಠಡಿಗಳಿಗೆ ಗ್ರೀನ್ ಬೋರ್ಡ್ ನೀಡಲಾಯಿತು. ಕಾರ್ಯಕ್ರಮದ ನೆನಪಿಗಾಗಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಧನ್ಯ ಶೆಟ್ಟಿ ಮತ್ತು ಶಂಕರ್ ಬಿ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಶೆಟ್ಟಿಗಾರ್ ವಂದಿಸಿದರು.