ಪಾರ್ಕ್​ನಲ್ಲಿ ವಾಕಿಂಗ್ ಮಾಡೋ ಮಹಿಳೆಯರೇ ಎಚ್ಚರ.. ಇಲ್ದಿದ್ರೆ ನಿಮಗೂ ಇದೇ ಗತಿ!

park pic
Published on

ಬೆಂಗಳೂರು: ಪಾರ್ಕ್​ನಲ್ಲಿ ವಾಕಿಂಗ್ ಮಾಡೋ ಮಹಿಳೆಯರ ಪೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸನ್ನ ಬಂಧಿತ ಆರೋಪಿ. ಜಯನಗರದ ಅಕ್ಕಮಹಾದೇವಿ ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಫೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದ. ಈ ಹಿಂದೆ ಕೂಡ ಹೀಗೆ ಮಹಿಳೆಯರ ಫೋಟೋ, ವಿಡಿಯೋ ತೆಗೆದಾಗ ಕೆಲ ಮಹಿಳೆಯರು ವಾರ್ನ್ ಮಾಡಿದ್ದರು.

ಅದ್ರೂ ಮತ್ತೆ ತನ್ನ ಚಾಳಿ ಮುಂದುವರೆಸಿ ವಿಡಿಯೋ ತೆಗೆಯುತ್ತಿದ್ದ ಆರೋಪಿಯನ್ನು ಹಿಡಿದು ಮೊಬೈಲ್ ಪರಿಶೀಲನೆ ಮಾಡಿದಾಗ ಈತನ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಆರೋಪಿಯನ್ನ ಜಯನಗರ ಪೊಲೀಸರಿಗೆ ಒಪ್ಪಿಸಿದ್ದು, ಐಪಿಸಿ ಸೆಕ್ಷನ್ 354 C ಮತ್ತು 354 D ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net