ಆಗಸ್ಟ್ 28 ರಂದು ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಶಾಖೆ ಹೊಸ ಕಟ್ಟಡಕ್ಕೆ

parivar
Published on

ಮಂಗಳೂರು: ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಶಾಖೆ ಆಗಸ್ಟ್ 28 ರಂದು ನಗರದ ನಂದಿಗುಡ್ಡೆ ಬಸ್ ನಿಲ್ದಾಣ ಹತ್ತಿರದ ಎನ್‌ಫೋರ್ಸ್ ಲೆಜೋರಿನ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಅಂದು ಬೆಳಗ್ಗೆ 11.30 ಕ್ಕೆ ನೂತನ ಕಚೇರಿಯನ್ನು ಶಕ್ತಿನಗರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಉದ್ಘಾಟಿಸುವರು ಎಂದು ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಎ. ಹೇಳಿದರು.
ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಭರತ್ ಕುಮಾರ್, ಕಟ್ಟಡದ ಮಾಲೀಕ ಸುರೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಎ. ಅಧ್ಯಕ್ಷತೆ ವಹಿಸುವರು. ಹೆಚ್ಚಿನ ಪಾರ್ಕಿಂಗ್ ಪ್ರದೇಶ ಹಾಗೂ ಸ್ಥಳಾವಕಾಶಕ್ಕಾಗಿ ಶಾಖೆಯ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಂಘವು ವರದಿ ವರ್ಷದಲ್ಲಿ 153.45 ಕೋಟಿ ರೂ. ವ್ಯವಸಹಾರ ನಡೆಸಿ 49,73,971 ರೂ ಲಾಭ ಗಳಿಸಿದೆ. ದುಡಿಯುವ ಬಂಡಬಾಳ 35.84 ಕೋಟಿ ರೂ ಇದ್ದು, ಸಾಲ ವಸೂಲಾತಿ ಶೇ.95.14 ಇದೆ. ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ತರಗತಿ ಪಡೆದಿದೆ. 2022- 2023 ನೇ ಸಾಲಿನಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಡ್ ಒದಗಿಸಲು ಶಿಫಾರಸು ಮಾಡಲಾಗಿದೆ ಎಂದು ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ. ಮಾಹಿತಿ ನೀಡಿದರು.
ಸೊಸೈಟಿಯ ನಿರ್ದೇಶಕರಾದ ಕೊಡಂಗೆ ಬಾಲಕೃಷ್ಣ ನಾಕ್‌ಗುಲಾಬಿ ಕೆ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net