

ಹುಬ್ಬಳ್ಳಿ: ಸಾರ್ವಜನಿಕ ರಂಗದಲ್ಲಿ ಎಲ್ಲರಿಗೂ ಸೇವೆ ಮಾಡುವ ಮುಕ್ತ ಅವಕಾಶವಿದೆ. ಸೇವೆಯ ಹೆಜ್ಜೆ ಗುರುತುಗಳು ಯುಗಯುಗಗಳಲ್ಲಿ ಉಳಿಯಬೇಕು. ಅಂದಾಗ ಮಾತ್ರ ಆ ವ್ಯಕ್ತಿಯ ಸೇವೆ ಸಾರ್ಥಕವಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನ ಪರಿಷತ್ ಪ್ರವೇಶಿಸಿ 45ವರ್ಷ ಪೂರೈಸಿ, ದಾಖಲೆ ನಿರ್ಮಿಸಿದ ಹಿನ್ನಲೆಯಲ್ಲಿ ನಗರದ ಅವರ ಗೃಹ ಕಚೇರಿಯಲ್ಲಿ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಆದರ್ಶ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರ, ಅಂತಸ್ತಿಗಿಂತ ಸಮಾಜ ಸೇವೆ ಎಲ್ಲದಕ್ಕಿಂತ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತ ಸಂಸ್ಥಾಪಕ ಗಂಗಾಧರ ದೊಡ್ಡವಾಡ, ಡಾ. ಸರ್ವಮಂಗಳಾ ಕುದರಿ, ಪ್ರಭಾ ಮಠದ, ಡಾ. ದಾಕ್ಷಾಯಿಣಿ ಗೊಬ್ಬರಗುಂಪಿ, ಸರೋಜಾ ಪಾಟೀಲ, ಡಾ. ಶಾಂತಾ ಪಾಟೀಲಕುಲಕರ್ಣಿ, ಮಂಗಲಾ ನರವಣಿ, ಮುಂತಾದವರು ಉಪಸ್ಥಿತರಿದ್ದರು.