ಪರಿಸರ ಶುದ್ಧವಾಗಿದ್ದರೆ ಉತ್ತಮ ಆರೋಗ್ಯ: ಜಿಲ್ಲಾ ಪರಿಸರ ಅಧಿಕಾರಿ ಬಿ.ಪಿ.ಗೀತಾ ಅಭಿಮತ

1 (1)
Published on

ಮಂಡ್ಯ: ಸಕಲ ಜೀವರಾಶಿಗಳು ನಿರಾಳವಾಗಿ ಜೀವಿಸಬೇಕಾದರೆ ಅಮ್ಲಜನಕದ ಅವಶ್ಯಕತೆ ಇದೆ. ಅದರಂತೆ ಪ್ರಕೃತಿ ಮತ್ತು ಪರಿಸರ ಶುದ್ಧವಾಗಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ಜಿಲ್ಲಾ ಪರಿಸರ ಅಧಿಕಾರಿ ಬಿ.ಪಿ.ಗೀತಾ ಹೇಳಿದರು.

ನಗರದ ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆಯೇ ಹೊರತು ದುರಾಸೆಗಳನಲ್ಲ. ನಾವು ಅದನ್ನು ಮನವರಿಕೆ ಮಾಡಿಕೊಂಡು ಪರಿಸರ ಕಾಳಜಿ ವಹಿಸಬೇಕು ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೇಶ್ ಮಾತನಾಡಿ, ಹಿಂದೆ ಎಲ್ಲ ಕಡೆ ನೆಡುತೋಪುಗಳು ಇರುವುದನ್ನು ನಾವುಗಳು ನೋಡುತ್ತಿದ್ದೆವು. ಆದರೆ ಈಗ ಎಲ್ಲವೂ ನಾಶವಾಗಿದೆ ಎಂದರು.

ಪರಿಸರ ಇಲಾಖೆಯ ಭವ್ಯಾ, ಬೀದಿ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಂತೆ ಕಸಲಗೆರೆ ಬಸವರಾಜು, ಕಲಾವಿದರಾದ ಬಂದೇಶ್, ರಾಜಣ್ಣ, ವೈರಮುಡಿ, ನವೀನ್ ಇತರರಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net