

ಮಂಡ್ಯ: ಮಕ್ಕಳು ಬಾಲ್ಯದಿಂದಲೇ ಯೋಗಾಸನ ರೂಢಿಸಿಕೊಳ್ಳಿ ಎಂದು ಪರಿಣಿತ ವಿದ್ಯಾಸಂಸ್ಥೆಯ ಸಂಸ್ಥಾಪಕ ರಾಮಲಿಂಗಯ್ಯ ಸಲಹೆ ನೀಡಿದರು.
ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ವ ರೋಗಕ್ಕೂ ಯೋಗಾಸನ ಔಷಧವಿದ್ದಂತೆ. ಯೋಗ ಮಾಡಲು ಯಾವುದೇ ವಯೋಮಿತಿ ಇಲ್ಲ. ಇಂದಿನ ಒತ್ತಡದ ಜೀವನದಲ್ಲಿ ಎಲ್ಲ ವಯೋಮಾನದವರು ಯೋಗಾಭ್ಯಾಸ ಮಾಡುವುದು ಒಳಿತು. ನಿರಂತರ ಅಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕ ಸುರೇಶ್, ರಮೇಶ್, ಶಿಕ್ಷಕರು ಇದ್ದರು. ಇದೇ ವೇಳೆ ಯೋಗ ಗುರು ಫಿಲಿಪ್ಸ್ ವಿದ್ಯಾರ್ಥಿಗಳಿಗೆ ಯೋಗಾಸನ ಹೇಳಿಕೊಟ್ಟರು.