ಪಾರಿಜಾತ ನಮ್ಮ ನಾಡಿನ ಹಿರಿಮೆ

Parijata is the pride of our country
ಲೋಕಾಪುರದ ವೆಂಕಟಾಪುರ ಓಣಿಯಲ್ಲಿ ವೀರಭದ್ರೇಶ್ವರ ಕಾರ್ತಿಕೋತ್ಸವ ನಿಮಿತ್ತ ಪಾರಿಜಾತ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉದ್ಘಾಟಿಸಿದರು. ಎಂ.ಎಂ. ವಿರಕ್ತಮಠ, ವಿನೋದ ಹತ್ತಳ್ಳಿ, ಹೊಳಬಸಯ್ಯ ಸಂಬಾಳದ ಇದ್ದರು.
Published on

ಲೋಕಾಪುರ: ನಾಡಿನ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದವರಲ್ಲಿ ಪಾರಿಜಾತ ಕಲಾವಿದರು ಪ್ರಮುಖರು. ಅದು ನಮ್ಮ ನಾಡಿದ ಹಿರಿಮೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಪಟ್ಟಣದ ವೆಂಕಟಾಪುರ ಓಣಿಯಲ್ಲಿ ವೀರಭದ್ರೇಶ್ವರ ಕಾರ್ತಿಕೋತ್ಸವದಲ್ಲಿ ಪಾರಿಜಾತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಸಂದೇಶ ಇಡೀ ಮನಕುಲಕ್ಕೆ ಉತ್ತಮ ಸಂದೇಶ ನೀಡಿದೆ. ಪಾರಿಜಾತ ರಂಗಭೂಮಿ ಕಲಾವಿದರು ಬದುಕಿನ ಬವಣೆಯಲ್ಲಿಯೂ ಕಲಾರಸಿಕರ ಮನಸ್ಸು ಸಂತಸಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿಯೂ ಅವನತಿಯ ಹಾದಿ ಹಿಡಿದಿರುವ ಪಾರಿಜಾತ ಉಳಿವಿಗೆ ನೂರಾರು ಕಲಾವಿದರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ ಮಾತನಾಡಿ, ಸರ್ಕಾರ ಪಾರಿಜಾತ ಕಲಾವಿದರಿಗೆ ನೀಡುವ ಮಾಸಾಶನವನ್ನು ಇನ್ನಷ್ಟು ಹೆಚ್ಚಿಸಬೇಕು. ಸಂಕಷ್ಟದಲ್ಲಿರುವ ಪಾರಿಜಾತ ಕಂಪನಿಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದರು.

ಜಿಲ್ಲಾಧಿಕಾರಿಗಳು ಭಕ್ತಿಗೀತೆ ಹಾಡಿ ರಂಜಿಸಿದರು. ವಿವಿಧ ಕಲಾತಂಡಗಳಿಂದ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಿತು. ಸಂಜೆ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಕಲಾವಿದರು, ದಾನಿಗಳನ್ನು ಸನ್ಮಾನಿಸಲಾಯಿತು.

ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ, ಕಲಾವಿದರಾದ ಮಲ್ಲಮ್ಮ ಮ್ಯಾಗೇರಿ, ಯಲ್ಲವ್ವ ರೊಡ್ಡಪ್ಪನವರ, ಮಲ್ಲಿಕಾರ್ಜುನ ಮುದಕವಿ, ಕಾಶಿಬಾಯಿ ದಾದನಟ್ಟಿ, ಕೃಷ್ಣಾ ಭಜಂತ್ರಿ, ನಾರಾಯಣ ಪತ್ತಾರ, ಮಲ್ಲಯ್ಯ ಸಂಬಾಳದ, ಲಕ್ಷ್ಮಣ ಮುದ್ದಾಪುರ, ಚೆನ್ನಪ್ಪ ಮುದ್ದಾಪುರ, ಕಾಶಲಿಂಗ ಮಾಳಿ, ಲೋಕಣ್ಣ ದೊಡಮನಿ, ಈರಣ್ಣ ಬಳಿಗಾರ, ಗುತ್ತಿಗೆದಾರ ಚಂದ್ರಶೇಖರ ರಡ್ಡಿ, ಎಸ್.ಎನ್. ಹಿರೇಮಠ, ರವಿ ಬೋಳಿಶೆಟ್ಟಿ, ಆನಂದ ಹವಳಖೋಡ, ಷಣ್ಮುಖಪ್ಪ ಕೋಲ್ಹಾರ, ಮಲ್ಲಪ್ಪ ಬೆಳಗಲಿ, ಮಂಜು ದೊಡಮನಿ, ಬಸಪ್ಪ ಮುದ್ದಾಪುರ, ಲೋಕಣ್ಣ ಗದ್ಯಾಳ, ಶಂಕರ ದುಂಡಪ್ಪಗೋಳ, ವಿಠ್ಠಲ ಕಲಾಲ, ಈರಪ್ಪ ಮುದ್ದಾಪುರ, ಬಸವರಾಜ ಬೂದಿಹಾಳ, ಬಸವರಾಜ ಚಿಪ್ಪಲಕಟ್ಟಿ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಸರ್ವ ಸದಸ್ಯರು, ಯುವಕ ಸಂಘ, ಸೀ ಶಕ್ತಿ ಸಂಘ, ಮಹಿಳಾ ಮಂಡಳಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net