

ಮಂಗಳೂರು: ಹೆಣ್ಣು ಮಕ್ಕಳು ಹಿಜಾಬ್ ಧರಿಸಬೇಕೇ ಬೇಡವೇ ಎಂದು ಹೆತ್ತವರು ತೀರ್ಮಾನಿಸಲಿ. ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಾದ ಪಿಎಫ್ಐ, ಎಸ್ ಡಿಪಿಐ ಮೊದಲಾವುಗಳು ಹಿಜಾಬ್ ಕುರಿತ ತೀರ್ಪಿನ ವಿಚಾರಗಳನ್ನು ವಿರೋಧಿಸುವುದರೊಂದಿಗೆ ಹೆತ್ತವರು, ವಿದ್ಯಾರ್ಥಿನಿಯರಿಗೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಆ ಮೂಲಕ ಮೂಲಭೂತವಾದಿಗಳ ಪ್ರಮುಖ ಆಶಯವಾಗಿರುವ ಹೆಣ್ಣುಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸುವ ಕೆಲಸವೂ ನಡೆಯುತ್ತಿದೆ ಎಂದು ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದ್ದಾರೆ. ಸಿಪಿಐಎಂ ವತಿಯಿಂದ ಸೋಮವಾರ ಮಂಗಳೂರಿನ ಪುರಭವನದಲ್ಲಿ ಜರುಗಿದ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶಗಳಲ್ಲಿ ಸೌಹಾರ್ದತೆ ಕದಡುವಲ್ಲಿ, ಬಾಹ್ಯ ಶಕ್ತಿಗಳಿಗಿಂತ ಆಂತರಿಕ ಶಕ್ತಿಗಳ ಪಾತ್ರ ದೊಡ್ಡದಿದೆ. ಬಿಜೆಪಿ ಸಂಘಪರಿವಾರಗಳೇ ದೇಶದ ಸೌಹಾರ್ದತೆಗೆ ದೊಡ್ಡ ಅಪಾಯವಾಗಿದೆ ಎಂದರು.