

ಬಾದಾಮಿ: ಒಂದು ಶಾಲೆ ಎಲ್ಲಾ ರೀತಿಯಾಗಿ ಅಭಿವೃದ್ಧಿ ಹೊಂದಲು ಪಾಲಕರು ಶಾಲೆಯೊಂದಿಗೆ ನಿರಂತರವಾದ ಸಂಪರ್ಕ ಹಾಗೂ ಸಹಕಾರ ಅತೀ ಮುಖ್ಯವಾಗಿದೆ ಎಂದು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಎಸ್.ಪಿ.ಗೌಡರ ಹೇಳಿದರು.
ತಾಲೂಕಿನ ಯಂಕಂಚಿ-ಮಣಿನಾಗರ ಗ್ರಾಮದಲ್ಲಿರುವ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ 2025-26 ನೇ ಸಾಲಿನ ಮೊದಲ ಪಾಲಕ/ಪೋಷಕರ ಸಭೆಯನ್ನು ಉಧ್ಘಾಟಿಸಿ ಮಾತನಾಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ವ್ಹಿ.ಗೌಡಪ್ಪಗೌಡ್ರ ಮಾತನಾಡಿ, ಸರ್ಕಾರದ ಎಲ್ಲಾ ಯೋಜನೆಗಳು ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳನ್ನು ಈ ಶಾಲೆಯವರು ಪ್ರಮಾಣಿಕವಾಗಿ ಬಳಕೆ ಮಾಡುತ್ತಿದ್ದು, ಎಲ್ಲಾ ಶಿಕ್ಷಕರು ಬದ್ಧತೆಯಿಂದ ಶಾಲಾ ಅಭಿವೃದ್ಧಿಗೆ ಪ್ರಯತ್ನಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಬಸಮ್ಮ ನರಸಾಪುರ, ಸಹಶಿಕ್ಷಕಿ ಅನಿತಾ ಜಲಗೇರಿ ಸೇರಿದಂತೆ ಶಾಲಾ ಮಕ್ಕಳು, ಪಾಲಕರು,ಪೋಷಕರು, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.