ಮಕ್ಕಳಿಗೆ ಉತ್ತಮ ಶಿಕ್ಷಣ ಪಾಲಕರು ಕಲ್ಪಿಸಲಿ

ಅರಕಲಗೂಡು ತಾಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಮಂಜು, ಜಯದೇವ ಸ್ವಾಮೀಜಿ, ಪ್ರದೀಪ್ ರಾಮಸ್ವಾಮಿ, ಪಾಂಡುರಂಗ ಇತರರಿದ್ದರು.
ಅರಕಲಗೂಡು ತಾಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಮಂಜು, ಜಯದೇವ ಸ್ವಾಮೀಜಿ, ಪ್ರದೀಪ್ ರಾಮಸ್ವಾಮಿ, ಪಾಂಡುರಂಗ ಇತರರಿದ್ದರು.
Published on

ಅರಕಲಗೂಡು: ಶಿಕ್ಷಣದಿಂದಷ್ಟೇ ಬದಲಾವಣೆ ಸಾಧ್ಯವಿದ್ದು, ರೈತರು ತಮ್ಮ ಮಕ್ಕಳನ್ನು ಬುದ್ಧಿವಂತರು, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.

ತಾಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ತಾಲೂಕು ಕುಂಚಿಟಿಗರ ಸಂಘ ವತಿಯಿಂದ ಭಾನುವಾರ ಆಯೋಜಿಸಿದ್ದ 11ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಸಭೆ ಉದ್ಘಾಟಿಸಿ ಮಾತನಾಡಿದರು. ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡಬೇಕು ಎಂದರು.

ಕುಂಚಿಟಿಗರಿಗೆ ಒಬಿಸಿ ಸವಲತ್ತುಗಳು ಸಿಕ್ಕಿಲ್ಲ. ಕುಂಚಿಟಿಗರು ಬುಡಕಟ್ಟು ಸಂಸ್ಕೃತಿಯಿಂದ ಕೃಷಿ ಹಿನ್ನೆಲೆಯಲ್ಲಿ ಬಂದಿದ್ದು, ಒಕ್ಕಲಿಗ ಸಮುದಾಯದ ಬಹುದೊಡ್ಡ ಅಂಗವೆಂದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನದಲ್ಲಿ ಸ್ಪಷ್ಟಪಡಿಸಿದ್ದರೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಸಿಕ್ಕಿಲ್ಲ. ಇದಕ್ಕಾಗಿ ನೆಡೆಸುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಕುಂಚಿಟಿಗರ ಸಂಘದ ಅದ್ಯಕ್ಷ ಎಂ.ಟಿ.ಪಾಂಡುರಂಗ ಮಾತನಾಡಿ, ಜಾತಿ ದೃಢೀಕರಣ ಪತ್ರದಲ್ಲಿ ಕುಂಚಿಟಿಗ ಎಂದು ನಮೂದಿಸಿರುವ ಗ್ರಾಮಾಂತರ ಪ್ರದೇಶದವರಿಗೆ ಓಬಿಸಿಯಿಂದ ಅನ್ಯಾಯವಾಗಿದೆ. ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಂಚಿಟಿಗ ಸಮಾಜದವರು ಒಕ್ಕಲಿಗ ಎಂದು ನಮೂದಿಸಿಕೊಂಡಿದ್ದಾರೆ. ಕುಂಚಿಟಿಗ ಒಕ್ಕಲಿಗ ಎಂದು ಕರೆಯಲಾಗುತ್ತಿದ್ದು, ಅವರಿಗೆ 3 ಎ ಸೌಲಭ್ಯ ದೊರೆಯುತ್ತಿದೆ. ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮೀಸಲಾತಿ ಬೇಕಿದೆ. ಇದಕ್ಕಾಗಿ ಹೋರಾಟ ಮಾಡಬೇಕು ಎಂದರು.

ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ, ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾದ ಗೋವಿಂದೇಗೌಡ, ಕೃಷ್ಣೇಗೌಡ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.80 ಮೇಲ್ಪಟ್ಟ ಸುಮಾರು 55 ಕುಂಚಿಟಿಗ ಸಮುದಾಯದ ಮಕ್ಕಳು ಮತ್ತು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು.

ಚಿಕ್ಕಮಗಳೂರು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಸಿ.ಎಸ್.ರಂಗನಾಥ್, ಜಿಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ, ತಾಲೂಕು ಕುಂಚಿಟಿಗರ ಸಂಘದ ಉಪಾಧ್ಯಕ್ಷ ವೈ.ಟಿ.ಕುಮಾರ್, ಚಂದ್ರೇಗೌಡ, ಸತೀಶ್, ವಿಶ್ವನಾಥ್, ಅಣ್ಣೇಗೌಡ, ಲತಾ ಈರೇಗೌಡ, ಕೆ .ಕೆ.ಹರೀಶ್, ಎನ್.ಕೆ.ರಾಮೇಗೌಡ, ಎನ್.ಆರ್.ಭಾಸ್ಕರ್, ರವಿ, ಚಂದ್ರಶೇಖರ್, ಕಾಳೇಗೌಡ, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net