ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಸಹಕರಿಸಲಿ

ಬೆಟ್ಟದಪುರ ಸಮೀಪದ ಭುವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು.
ಬೆಟ್ಟದಪುರ ಸಮೀಪದ ಭುವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು.
Published on

ಬೆಟ್ಟದಪುರ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಪ್ರಮುಖವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ರವಿಪ್ರಸನ್ನ ಹೇಳಿದರು.

ಸಮೀಪದ ಭುವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾ ಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲು ಇಂತಹ ಶಾಲಾ ವಾರ್ಷಿಕೋತ್ಸವ ಅತ್ಯಗತ್ಯ. ಇದನ್ನು ಆಯೋಜಿಸುವ ಮೂಲಕ ಭುವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ ಎಂದರು.

ಶಾಲೆ ಮುಖ್ಯ ಶಿಕ್ಷಕಿ ಸಿ.ಎಂ.ಗೀತಾ ಮಾತನಾಡಿ, ಶಾಲೆ ಅಭಿವೃದ್ಧಿ ಹಾಗೂ ವಾರ್ಷಿಕೋತ್ಸವಕ್ಕಾಗಿ ಹಣ ಮತ್ತು ಭೌತಿಕ ವಸ್ತುಗಳ ರೂಪದಲ್ಲಿ ಸುಮಾರು ಎರಡು ಲಕ್ಷ ರೂ. ಮೌಲ್ಯಕ್ಕಿಂತ ಹೆಚ್ಚು ದಾನ ಸಂಗ್ರಹವಾಗಿದ್ದು, ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶಾಲೆ ಆಭಾರಿಯಾಗಿರುತ್ತದೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ, ನೃತ್ಯ, ನಾಟಕ, ಹಾಡು, ಮಿಮಿಕ್ರಿ ಮುಂತಾದ ಮನರಂಜನಾ ಕಾರ್ಯಕ್ರಮ ಗಮನ ಸೆಳೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಸ್.ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ, ಸದಸ್ಯರಾದ ಮಮತಾ, ದೀಪು ಗಿರೀಶ್, ಬಸವರಾಜು, ನಂದಿನಿ, ಶಿವಕುಮಾರ್, ಸಿಆರ್‌ಪಿ ಚೇತನ್, ಶಿಕ್ಷಕರಾದ ಮೂರ್ತಿ, ಮಂಜುಳಾ, ಕವಿತಾ, ಸಂತೋಷ್, ಲಕ್ಷ್ಮೀ, ಮುಖಂಡರಾದ ಪಟೇಲ್ ರಾಜೇಗೌಡ, ನಾಗೇಂದ್ರ, ಸೋಮೇಗೌಡ, ಬಿ.ವಿ ಗಿರೀಶ್, ಸಣ್ಣಸ್ವಾಮಿಗೌಡ, ರಾಮಶೆಟ್ಟರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net