ಪಾಲಕರನ್ನು ಹೆದರಿಸಲು ವಿಷ ಕುಡಿದ ಯುವಕ ಸಾವು

Crime Logo
Published on

ಹಾವೇರಿ: ಪಾಲಕರನ್ನು ಹೆದರಿಸುವ ಸಲುವಾಗಿ ವಿಷ ಸೇವಿಸಿದ ಯುವಕನೊಬ್ಬ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ತಾಲೂಕಿನ ಮರಡೂರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ತಿಮ್ಮರೆಡ್ಡಿ ವೆಂಕರೆಡ್ಡಿ (15) ಮೃತ ಯುವಕ.
ಈತ ತನ್ನ ತಂದೆ ಟೈಲ್ಸ್ ಕಲ್ಲುಗಳನ್ನು ತರಲು ತನ್ನನ್ನು ಲಕ್ಷ್ಮೇಶ್ವರಕ್ಕೆ ಕರೆದುಕೊಂಡು ಹೋಗಲಿಲ್ಲ ಎನ್ನುವ ಕಾರಣಕ್ಕೆ ಮನೆಯವರನ್ನು ಹೆದರಿಸಲು ಯಾವುದೋ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಹೊಸರಿತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net