ಪಾಲಕರೇ, ಮಕ್ಕಳ ಭಾವನೆಗಳಿಗೆ ಸ್ಪಂದಿಸಿ

1nrp 3
Published on

ಎನ್.ಆರ್.ಪುರ: ಪ್ರತಿ ಮಕ್ಕಳು ಪಾಲಕರು ಹಾಗೂ ಶಿಕ್ಷಕರ ನಡವಳಿಕೆಗಳನ್ನು ಗಮನಿಸಿ ಅನುಕರಣೆ ಮಾಡುತ್ತಾರೆ ಎಂದು ಪೀಣ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶೃತಿ ತಲನೇರಿ ಹೇಳಿದರು.

ದೇವಾಲೆಕೊಪ್ಪ ಚಿನ್ನಯ್ಯ ಗೌಡ ಸ್ಮಾರಕ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪಾಲಕರು, ಶಿಕ್ಷಕರು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು ಇದು ಮಕ್ಕಳಿಗೆ ಪಾಠವಾಗಲಿದೆ. ಪ್ರತಿದಿನ ಮಕ್ಕಳಿಗಾಗಿ ಸಮಯ ನೀಡಬೇಕು. ಯಾವುದೇ ಕಾರ್ಯವನ್ನು ಸಂಘಟಿತರಾಗಿ ಮಾಡಿದರೆ ಯಶಸ್ಸು ಸಿಗಲಿದೆ ಎಂಬುದಕ್ಕೆ ಡಿಸಿಎಂಸಿ ಶಾಲೆ ಉದಾಹರಣೆಯಾಗಿದೆ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಮಕ್ಕಳು ಪಿಯುಸಿ ಶಿಕ್ಷಣ ಮುಗಿಸುವವರಗಾದರೂ ಪಾಲಕರು ಮಕ್ಕಳ ಹತ್ತಿರವಿದ್ದು, ಅವರ ಭಾವನೆಗಳಿಗೆ ಸ್ಪಂದಿಸುತ್ತಿರಬೇಕು. ಮಕ್ಕಳಿಗೆ ಯಾವ ವಿಚಾರದಲ್ಲಿ ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ರೋಟರಿ ನಿಕಟಪೂರ್ವ ಜಿಲ್ಲಾ ಗರ್ವನರ್ ಬಿ.ಸಿ.ಗೀತಾ ಅವರನ್ನು ಸನ್ಮಾನಿಸಲಾಯಿತು. ಒಕ್ಕಲಿಗರ ಸಂಘದ ನಿರ್ದೇಶಕ ಕೆ.ಕೆ.ವೆಂಕಟೇಶ್, ಡಿಸಿಎಂಸಿ ಪ್ರೌಢ ಶಾಲೆ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಶೈಕ್ಷಣಿಕ ಸಲಹೆಗಾರ ಬಿ.ಕೆ.ಉದಯಕರ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್, ಭದ್ರಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ, ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ, ಪಿ.ಕೆ.ಬಸವರಾಜಪ್ಪ, ತೃಪ್ತಿ ಅಮರ್, ಎಲ್.ಎಂ.ಸತೀಶ್, ಎಸ್.ಎನ್.ಲೋಕೇಶ್, ಚೈತ್ರಾ ರಮೇಶ್, ಎಚ್.ಡಿ.ವಿನಯ್, ಪದ್ಮ ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net