ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಪಾತ್ರ ದೊಡ್ಡದು

18 Dwd 11
Published on

ಧಾರವಾಡ: ವಿದ್ಯಾರ್ಥಿಗಳು ಜೀವನದಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ಶಿಕ್ಷಕರಷ್ಟೇ ಪೋಷಕರ ಜವಾಬ್ದಾರಿ ಕೂಡ ಮುಖ್ಯವಾಗಿರುತ್ತದೆ ಎಂದು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಪಾಲಕರ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ಡಾ. ಸುರೇಶ ಕುಲಕರ್ಣಿ ಮಾತನಾಡಿ, ಮಕ್ಕಳ ಯಶಸ್ಸಿನಲ್ಲಿ ಪಾಲಕರ ಜವಾಬ್ದಾರಿ ಕೂಡ ಮಹತ್ವದ್ದು. ಮಕ್ಕಳು ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಸಾಧನೆಗೈಯಲು ಪಾಲಕರು ಪ್ರೇರೇಪಿಸಬೇಕು ಎಂದರು.
ಎಸ್.ಬಿ. ಹಿಂಚಿಗೇರಿ, ವಿನಾಯಕ ಜೋಶಿ, ಡಾ. ರಾಧಾಕೃಷ್ಣನ್, ಲಕ್ಷ್ಮ್ಮಣ ಕಮತರ, ಪ್ರಾಚಾರ್ಯೆ ವೀಣಾ ತುಪ್ಪದ, ಸುರೇಖಾ ಚಾಂದಗುಡೆ, ವಿಜಯಲಕ್ಷ್ಮೀ ಹಾದಿಮನಿ, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net