

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ. ಶಾಲಾ ಪ್ರಿ ಪ್ರೈಮರಿ ವಿಭಾಗದಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ, ತಿಳುವಳಿಕಾ ತರಗತಿ ಕಾರ್ಯಕ್ರಮ ಜರುಗಿತು.
ಶಾಲಾಡಳಿತ ಸಲಹೆಗಾರ ಶ್ರೀಧರ್ ರಾವ್ ಅಧ್ಯಕ್ಷತೆ ವಹಿಸಿ, ಪ್ರಿ ಪ್ರೈಮರಿ ವಿಭಾಗದ ವ್ಯವಸ್ಥೆ ಬಗ್ಗೆ ತಿಳಿಸಿದರು. ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿ.ಎ.ಯು.ಪಿ. ಶಾಲೆ ನಿವೃತ್ತ ಅಧ್ಯಾಪಕ ದಾಮೋದರ ಮೂಲ್ಯ ಕೆ. ಪಾಲಕರಿಗೆ ತಿಳುವಳಿಕಾ ನಡೆಸಿದರು. ಶಿಕ್ಷಕಿ ರಾಜೇಶ್ವರಿ ನಿರೂಪಿಸಿದರು.