ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಪಾಲಕರ ಸಭೆ

New Project (18)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಬೆಳುವಾಯಿ ವಿದ್ಯಾವರ್ಧಕ ಸಂಘ, ರಿಜುವಿನೆಟ್ ಚೈಲ್ಡ್ ಫೌಂಡೇಶನ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ತರಬೇತಿ ಕೇಂದ್ರದಲ್ಲಿ ಪೋಷಕರ ಸಭೆ ಇತ್ತೀಚೆಗೆ ನಡೆಯಿತು.

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಜಂಟಿ ಸಹಯೋಗದಲ್ಲಿ ನಡೆದ ಆಧಾರ್ ನೋಂದಣಿ, ತಿದ್ದುಪಡಿ, ಸೇವಾ ಸೌಲಭ್ಯ, ಆರೋಗ್ಯ, ಅಪಘಾತ ವಿಮಾ ಶಿಬಿರ, ಪೋಷಕರ ಸಭೆ ಆಯೋಜಿಸಲಾಯಿತು. ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಉದ್ಘಾಟಿಸಿದರು. ಸರ್ಕಾರದ ಅನುದಾನ ಇಲ್ಲದೆ ಸಾಮಾನ್ಯರ ಸಹಕಾರದಿಂದ ಉಚಿತ, ಉತ್ತಮವಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ನಡೆಸಬಹುದು ಎಂದು ಪ್ರಕಾಶ್ ಶೆಟ್ಟಿಗಾರ್ ನಿರೂಪಿಸಿದ್ದಾರೆ ಎಂದರು.

ಪುತ್ತೂರು ಅಂಚೆ ಇಲಾಖೆ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಕೆ.ಎಸ್.ಅಂಚೆ ಇಲಾಖೆ ಸೇವೆಗಳ ಮಾಹಿತಿ ನೀಡಿದರು ಬೆಳುವಾಯಿ ಗ್ರಾಪಂ ಅಧ್ಯಕ್ಷ ಸುರೇಶ್ ಪೂಜಾರಿ, ವಿದ್ಯಾವರ್ಧಕ ಸಂಘದ ಸಂಚಾಲಕ ರಾಜೇಶ್ ಸುವರ್ಣ, ಪ್ರವೀಣ್ ಮಸ್ಕರೇನಸ್, ಪೋಷಕರ ಸಮಿತಿ ಅಧ್ಯಕ್ಷೆ ಲತಾ ಸುರೇಶ್, ಹೊಸಂಗಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ, ಬೆಳುವಾಯಿ ಪ್ರವೀಣ್ ಜೈನ್ ಉಪಸ್ಥಿತರಿದ್ದರು. ಶಾಲಾ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ನಿರೂಪಿಸಿದರು. ಸುಚಿತ್ರಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net