ಪಾಲಕರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

blm (1)
Published on

ಕಾರ್ಕಳ: ತಂದೆ ತಾಯಿಯ ಪರಿಶ್ರಮವನ್ನು ಮಕ್ಕಳು ಮರೆಯಬಾರದು. ಅವರ ಆದರ್ಶಗಳನ್ನು ಸ್ಮರಿಸಿ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ದಾನಿ, ಸಿಎ ಕಮಲಾಕ್ಷ ಕಾಮತ್ ಹೇಳಿದರು. ಕಾರ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಯಾಗಿರುವ ಸಿಎ ಕಮಲಾಕ್ಷ ಕಾಮತ್ ಅವರು ತಮ್ಮ ತಂದೆ-ತಾಯಿ ಸ್ಮರಣಾರ್ಥ ನಿರ್ಮಿಸಿಕೊಟ್ಟ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ನಿವೃತ್ತ ಇಸ್ರೋ ವಿಜ್ಞಾನಿ ಇಡ್ಯಾ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ ಕಾಮತ್ ಹಾಗೂ ಕಟ್ಟಡ ಇಂಜಿನಿಯರ್ ಶ್ರೀಪ್ರಸಾದ್ ಬೆಳ್ಳಿರಾಯ ಅವರನ್ನು ಸನ್ಮಾನಿಸಲಾಯಿತು. ಶಾಂತಿ ವಿಠಲ್ ಟ್ರಸ್ಟ್ ವತಿಯಿಂದ ಆಯ್ದ ಎಂಟು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪನಿರ್ದೇಶಕ ವಾರುತಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಸಿಬಿಸಿ ಕೋಶಾಧಿಕಾರಿ ನಿತ್ಯಾನಂದ ಪೈ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಅಶೋಕ ಅಡ್ಯಂತಾಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಸಿಬಿಸಿ ಸದಸ್ಯ ನಾಗೇಶ ದೇವಾಡಿಗ ಉಪಸ್ಥಿತರಿದ್ದರು. ಉಪನ್ಯಾಸಕಿ ಜ್ಯೋತಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಸ್ಥೆ ಮಲ್ಲಿಕಾ ವಂದಿಸಿದರು. ಭೌತಶಾಸ್ತ್ರ ಉಪನ್ಯಾಸಕ ಸದಾನಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net