

ಪಟ್ಟನಾಯಕನಹಳ್ಳಿ: ಮಕ್ಕಳಿಗಾಗಿ ಆಸ್ತಿ ವಾಡುವುದು ಬೇಡ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಸವಾಜದಲ್ಲಿ ಉತ್ತಮವ್ಯಕ್ತಿಯಾಗಿ ರೂಪಿಸಬೇಕೆಂಬ ಸಂಕಲ್ಪ ಪ್ರತಿಯೊಬ್ಬ ಪಾಲಕರಲ್ಲಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಾರು ಅಭಿವೃದ್ಧಿ ನಿಗಮದ ವಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ನಾಡೋಜ ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ಭಾನುವಾರ ಶ್ರೀ ಕನಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂದಿಂದ ಆಯೋಜಿಸಿದ್ದ ಗೌಡಗೆರೆ ಹೋಬಳಿ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆಗಳಿವೆ. ಇಂತಹ ಪ್ರತಿಭಾ ಪುರಸ್ಕಾರಗಳು ಮಕ್ಕಳ ಶೈಕ್ಷಣಿಕ ಉತ್ಸಾಹಕ್ಕೆ ಮತ್ತಷ್ಟುಶಕ್ತಿ ತುಂಬಲಿದೆ ಎಂದರು.
ಶಿರಾ ನಗರಸಭೆ ಸದಸ್ಯ ಎಸ್.ಎಲ್.ರಂಗನಾಥ್ ವಾತನಾಡಿ, ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉಜ್ಜಲಗೊಳಿಸುತ್ತದೆ. ಹೆಚ್ಚು ಆಸಕ್ತಿ, ಕಲಿಯಬೇಕೆಂಬ ಉತ್ಸಾಹ ವಿದ್ಯಾರ್ಥಿಗಳಲ್ಲಿ ಮೂಡಿದಾಗ ಸಾಧನೆ ಸುಲಭವಾಗುತ್ತದೆ. ಪಾಲಕರ ಒತ್ತಾಸೆಯಂತೆ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ವಾಡಿ ಸವಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಪ್ರತಿಭಾ ಪುರಸ್ಕಾರ ನೆರವೇರಿಸಿ ವಾತನಾಡಿದ ಶಿರಾ ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಪ್ರತಿ ವಿದ್ಯಾರ್ಥಿ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಬೇಕೆಂಬ ಕನಸು ಹೊತ್ತು ಮುನ್ನಡೆಯಬೇಕು. ಕನಸು ನನಸಾಗಬೇಕೆಂದರೆ ಕಠಿಣ ಪರಿಶ್ರಮ, ಸಾಧಿಸಬೇಕೆಂಬ ಛಲ ತಮ್ಮಲ್ಲಿ ಮೂಡಿದರೆ ಯಶಸ್ಸು ತಾನಾಗಿಯೇ ಲಭಿಸಲಿದೆ. ಶಿಕ್ಷಣದ ಜತೆಗೆ ಪಾಲಕರನ್ನು ಗೌರವಿಸುವಂತಹ ಸಂಸ್ಕಾರವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಗೌಡಗೆರೆ ಹೋಬಳಿಯ ಕುರುಬ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಿರಾ ಕನಕ ಬ್ಯಾಂಕ್ ವ್ಯವಸ್ಥಾಪಕ ಆರ್.ಲಕ್ಷ್ಮಣ್, ಹೆಂದೊರೆ ಗ್ರಾಪಂ ವಾಜಿ ಅಧ್ಯಕ್ಷೆ ಲಕ್ಷ್ಮೀದೇವಿ,ಹೊಸೂರು ಗ್ರಾಪಂ ಅಧ್ಯಕ್ಷೆ ಎಚ್.ಲಕ್ಕಮ್ಮಮೈಲಪ್ಪ, ಪಟ್ಟನಾಯಕನಹಳ್ಳಿ ಕನಕ ಬ್ಯಾಂಕ್ ವ್ಯವಸ್ಥಾಪಕ ಅಶ್ವತ್ಥಯ್ಯ, ನಿವೃತ್ತ ಶಿಕ್ಷಕ ಪಾತಲಿಂಗಯ್ಯ, ಶಿಕ್ಷಕ ದೊಡ್ಡರಾಜು, ಚಂದ್ರು, ಪಿ.ಎ.ಮಂಜುನಾಥ್ ಇತರರು ಇದ್ದರು.