ಕೂಡಿಗೆ ಕಾಲೇಜಿನಲ್ಲಿ ಪೋಷಕರ ಸಭೆ

parents
Published on

ಕುಶಾಲನಗರ:

ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ ಪ್ರಾಂಶುಪಾಲ ಹೆಚ್.ಎಸ್. ನಾಗರಾಜ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸರ್ಕಾರ ಜಾರಿಗೆ ತಂದಿರುವ ಜ್ಞಾನ ಸೇತು ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ನೀಡದಿರುವುದು, ಓದಿನ ಕಡೆಗೆ ಮನೆಗಳಲ್ಲಿ ಹೆಚ್ಚು ಸಮಯ ನೀಡುವುದು ಮತ್ತಿತರ ವಿಷಯಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಯಿತು.

ಕಾಲೇಜಿನಲ್ಲಿ ಈಗಾಗಲೇ ವಿಶೇಷ ತರಗತಿಗಳನ್ನು ಆಯಾ ವಿಭಾಗದ ಉಪನ್ಯಾಸಕರು ತೆಗೆದುಕೊಳ್ಳುತ್ತಿದ್ದಾರೆ. ಆ ತರಗತಿಗೆ ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ನೀಗ ವಹಿಸುವ, ಮತ್ತು ಅನೇಕ ವಿದ್ಯಾರ್ಥಿಗಳು ಅನಾರೋಗ್ಯದಿಂದಾಗಿ ತರಗತಿಗೆ ಗೈರು ಹಾಜರು ಅಗುತ್ತಿರುವುದರಿಂದಾಗಿ ಪೋಷಕರು ವಿದ್ಯಾರ್ಥಿಗಳ ಆರೋಗ್ಯ ಕಡೆಗೂ ಗಮನ ಹರಿಸಬೇಕಾಗಿದೆ. ಇದುವರೆಗೂ ಕಾಲೇಜಿನ ವರ್ಷಂಪ್ರತಿಯ ಫಲಿತಾಂಶ ಉನ್ನತ ಮಟ್ಟದಲ್ಲಿ ಇರುವುದರಿಂದ ಅದೇ ರೀತಿಯ ಫಲಿತಾಂಶ ಗಳಿಸಲು ಪೋಷಕರ ಸಹಕಾರ ಮುಖ್ಯ ಎಂದು ಪ್ರಾಂಶುಪಾಲ ನಾಗರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ನಾಗಪ್ಪ ಏಲಕ್ಕಿಕಟ್ಟೆ, ಸತೀಶ್, ಹನುಮರಾಜ್ ಸೇರಿದಂತೆ ವಿವಿಧ ವಿಭಾಗ ಉಪನ್ಯಾಸಕರು, ಪೋಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net