

ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ಗುಣಮಟ್ಟದ ಕಲಿಕೆಗೆ ಪಾಲಕರು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಶಿಕ್ಷಣ ಸಂಯೋಜಕ ಶರಣಪ್ಪ ಹೇಳಿದರು.
ತಾಲೂಕಿನ ಇಂಗಳದಾಳ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಗುರುವಾರ ಮಾತನಾಡಿದರು. ಶಿಕ್ಷಣ ಕಲಿಕೆಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಪಾಲಕರು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನರು ಹಾಗೂ ದಾನಿಗಳು ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರನ್ನಾಗಿ ವಿರೂಪಾಕ್ಷಿ ಪೂಜಾರಿ, ಉಪಾಧ್ಯಕ್ಷರಾಗಿ ಸುನೀತಾ ಮಹೇಶ ನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಸಿಆರ್‌ಪಿ ವೆಂಕಟಾಂಜನೇಯ, ಮುಖ್ಯಶಿಕ್ಷಕ ಶ್ರೀರಾಮ್, ಪೊಲೀಸ್ ಬಸವರಾಜ, ಶಿಕ್ಷಕರಾದ ಅನಸೂಯಾ ದೇವಿ, ಮಲ್ಲಪ್ಪ ಬೂದಿನಾಳ, ಗ್ರಾಪಂ ಡೇಟಾ ಎಂಟ್ರಿ ಆಪರೇಟರ್ ವಿಶ್ವನಾಥ ಸ್ವಾಮಿ, ಮುಖಂಡರಾದ ಈಶಪ್ಪ ಪೂಜಾರಿ, ಗಂಗಪ್ಪ ಪೂಜಾರಿ, ಹನುಮಂತ್ರಾಯ, ಸುರೇಶ, ಹನುಮಂತ, ಬಸವರಾಜ, ಮಹೇಶ ಇದ್ದರು.