ಪಾಲಕರು ಮಕ್ಕಳ ವರ್ತನೆ ಗಮನಿಸುತ್ತಿರಲಿ...

PTA Meeting
Published on

ದಿನೇಶ ಹೆಗ್ಡೆ ಆತ್ರಾಡಿ ಸಲಹೆ

ಇಂದ್ರಾಳಿ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಲಿಕೆಯಲ್ಲಿರುವ ಮಕ್ಕಳ ವಿಚಾರವಾಗಿ ಶಾಲೆಯ ಅಧ್ಯಾಪಕರಿಗಿದ್ದಷ್ಟೇ ಜವಾಬ್ದಾರಿ ಪಾಲಕರಿಗೂ ಸಹ ಇದೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ್ದೇವಲ್ಲ ಎಂದು ಹೆತ್ತವರು ಸುಮ್ಮನೆ ಇರಬಾರದು. ಇತ್ತೀಚೆಗೆ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಪಾಲಕರೆಲ್ಲರೂ ತಮ್ಮ ಮಕ್ಕಳ ವರ್ತನೆ ಗಮನಿಸುತ್ತಿರಬೇಕು ಎಂದು ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ ಹೆಗ್ಡೆ ಆತ್ರಾಡಿ ಸಲಹೆ ನೀಡಿದರು.

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜುಲೈ 19ರಂದು ಆಯೋಜಿಸಿದ್ದ ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.

ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯೆ ವಿದ್ಯಾ ಅಮರ್​ ಪೈ, ಸಂದ ಉಪಾಧ್ಯಕ್ಷ ಶಶಿರಾಜ ಕುಂದರ್​ ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯೋಧ್ಯಾಪಕ ಕೆ.ವಿನಾಯಕ ಕಿಣಿ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ರೇಷ್ಮಾ ಪ್ರಭು ಶಾಲಾ ವರದಿ ವಾಚಿಸಿದರು. ಕೋಶಾಧಿಕಾರಿ ವೈಷ್ಣವಿ ಕಾಮತ 2024-25ನೇ ಸಾಲಿನ ಲೆಕ್ಕಪತ್ರದ ವರದಿ ವಾಚಿಸಿದರು. ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ದೀಪಿಕಾ ಭಟ್​, ಅಕ್ಷಯಾ ಭಟ್​, ಪ್ರತಿಭಾ ಎನ್​.ಬಿ. ಮತ್ತು ಅಶ್ವಿನಿ ಪ್ರಾರ್ಥಿಸಿದರು. ಶಿಕ್ಷಕಿ ಸತ್ಯವತಿ ಬಿ. ಸ್ವಾಗತಿಸಿದರು. ಶಿಕ್ಷಕಿ ಆಶಾ ವಿವೇಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಜಾತಾ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net