ಪಾಲಕರ, ಶಿಕ್ಷಕರ ಚಿಂತನಾ ಸಭೆ

New Project (1)
Published on

ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ-ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ ಪಾಲಕರ, ಶಿಕ್ಷಕರ ಚಿಂತನಾ ಸಭೆ ಶಿಶುಮಂದಿರ ವಠಾರದಲ್ಲಿ ನಡೆಯಿತು.

ಶಿಶು ಮಂದಿರದ ಅನ್ನದಾಸೋಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುತ್ತಿರುವ ದಾನಿಗಳಾದ ಧರ್ಣಪ್ಪ ಗೌಡ ನಿರುಂಬುಡ, ಸರಿತಾ ನಿರುಂಬುಡ, ಗಿರಿಧರ ಗೌಡ ನಿರುಂಬುಡ ಅವರನ್ನು ಗೌರವಿಸಲಾಯಿತು. 1ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಮಕ್ಕಳ ಪಾಲಕರು ಶಿಶುಮಂದಿರಕ್ಕೆ ಗೋಡ್ರೇಜ್ ಅನ್ನು ಕೊಡುಗೆಯಾಗಿ ನೀಡಿದರು. 2024-25ನೇ ಸಾಲಿನ ಮಾತೃ ಮಂಡಳಿ ಪದಾಧಿಕಾರಿಗಳು ಶಿಶುಮಂದಿರಕ್ಕೆ ದೀಪ ನೀಡಿದರು.

ಉದಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಎನ್, ಸಂಚಾಲಕರಾದ ಅಶೋಕ್ ಎನ್, ಶಿಶುಮಂದಿರದ ಹಳೇ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕಿಯರು, ಮಾತೃ ಮಂಡಳಿ, ಅಲೆಕ್ಕಿ ಮುಗೇರಡ್ಕ ಜೈ ಶ್ರೀರಾಮ್ ಮಹಿಳಾ ಸಂಘ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಭರತೇಶ್ ಪುಣ್ಕೆದಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net