ಮಾಂಸಪ್ರಿಯರೇ ಎಚ್ಚರ; ಚಿಕನ್ ಲೆಗ್ ಪೀಸ್ ಪಾರ್ಸೆಲ್ ತಂದ ಗ್ರಾಹಕನಿಗೆ ಕಾದಿತ್ತು ಶಾಕ್!

nonveg food covid care
Published on

ಕೋಲಾರ: ಗ್ರಾಹಕನೋರ್ವ ಹೋಟೆಲ್​ ಒಂದರಲ್ಲಿ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಮನೆಯಲ್ಲಿ ತೆಗೆದಾಗ ಚಿಕನ್​​ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್ ನಲ್ಲಿ ಪತ್ತೆಯಾಗಿದೆ.

ಕೆಜಿಎಫ್ ನಗರದ ವಿನೋದ್ ಎಂಬುವವರು ತೆಗೆದುಕೊಂಡ ಚಿಕನ್ ಲೆಗ್​ ಪೀಸ್​​ನಲ್ಲಿ ಹುಳ ಪತ್ತೆಯಾಗಿದೆ. ಗ್ರಾಹಕ ಚಿಕನ್ ಪೀಸ್ ಸಮೇತ ಹೋಟೆಲ್​ಗೆ ಬಂದು ಮಾಲೀಕರನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಈ ವೇಳೆ ಪರಿಶೀಲಿಸಿದಾಗ ಹೋಟೆಲ್​ನ ಮತ್ತಷ್ಟು ಚಿಕನ್ ಪೀಸ್ ನಲ್ಲೂ ಹುಳ ಪತ್ತೆಯಾಗಿದೆ. ಸ್ಥಳಕ್ಕೆ ನಗರಸಭೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು, ಹೋಟೆಲ್​​​ಗೆ ಬೀಗ ಮುದ್ರೆ ಜಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net