ಸೌಂದರ್ಯ ಲಹರಿ ಬಳಗದಿಂದ ನಾಮಾವಳಿ ಪಾರಾಯಣ ಮುಕ್ತಾಯ

Namavali-1
Published on

ಗದಗ: ಅಧಿಕ ಮಾಸದ ಅಂಗವಾಗಿ ಗದುಗಿನ ಸೌಂದರ್ಯ ಲಹರಿ ಬಳಗವು ನಗರದ ನಂದೀಶ್ವರ ಮಠದ ಆವರಣದಲ್ಲಿ ಕೈಗೊಂಡಿದ್ದ ವಿಷ್ಣು ಸಹಸ್ರ ನಾಮಾವಳಿ ಪಾರಾಯಣ ಹಾಗೂ ಲಲಿತಾ ಸಹಸ್ರ ನಾಮಾವಳಿ ಪಾರಾಯಣವು ಶುಕ್ರವಾರ ಮಹಾಮಂಗಲಗೊAಡಿತು.
ಸAಸ್ಕೃತ ಪಂಡಿತರಾದ ಗಣಪತಿಭಟ್ ಗಾಂವಕರ್ ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಲಹರಿ ಬಳಗದ ಸಹೋದರಿಯರು ೩೩ ದಿನಗಳ ಪಾರಾಯಣಗೈದರು. ಉಡಿ ತುಂಬುವ ಮೂಲಕ ಪಾರಾಯಣವು ಮಹಾಮಂಗಲಗೊಡಿತು.
ರಾಜೇಶ್ವರಿ ಶೆಟ್ಟರ, ಜಯಶ್ರೀ ಪಾಟೀಲ, ಶಿವಲೀಲಾ ಅಕ್ಕಿ, ರೇಣುಕಾ ಅಮಾತ್ಯ, ಲತಾ ಭರಮಗೌಡ್ರ, ಶಿವಲೀಲಾ ರಬ್ಬನಗೌಡ್ರ, ಶಾರದಾ ಕರಮುಡಿ, ಸುವರ್ಣ ತುಂಬಳ, ಸುನಂದಾ ಹುಂಬಿ, ಸುಷ್ಮಾ ಸಂಕಣ್ಣವರ, ಸುಜಾತಾ ಗುಡಿಮನಿ, ದೀಪಾ ಮುನವಳ್ಳಿ, ಪವಿತ್ರಾ ಬಿರಾದಾರ, ವಿದ್ಯಾ ಮುರಗೋಡ, ಶೋಭಾ ಕಲ್ಲನಗೌಡ್ರ, ಜ್ಯೋತಿ ಹೇಮಾದ್ರಿ, ಜಯಾ ಬಳ್ಳಾರಿ, ನಾಗರತ್ನ ಮಾರನಬಸರಿ, ವಿಜಯಾ ಪಾಟೀಲ, ವೀಣಾ ಮೆಣಸಿನಕಾಯಿ, ವಿಜು ಹಳ್ಳಿಕೇರಿ, ಲಲಿತಕ್ಕ ಮಾತೋಡ, ಸೀತಾ ಕಂದಗಲ್ಲ, ಕುಸುಮಾ ಹಡಗಲಿ, ಲಾವಣ್ಯ, ಗೀತಾ, ವಿದ್ಯಾ ಸೇರಿದಂತೆ ನೂರಾರು ಮುತ್ತೆöÊದೆಯರು ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net