ಹುಬ್ಬಳ್ಳಿ: ಇಲ್ಲಿಯ ನವನಗರದ ವಿಶ್ವಮಧ್ವ ಮಹಾ ಪರಿಷತ್ ಘಟಕದ ವತಿಯಿಂದ ನ. 24ರಂದು ಬೆಳಗ್ಗೆ 8.30ಕ್ಕೆ ಅಣುಭಾಷ್ಯ, ವಿಷ್ಣು ಸಹಸ್ರನಾಮ, ಸುಂದರಕಾಂಡ ರಾಮಾಯಣ, ಹರಿವಾಯುಸ್ತುತಿ, ಶ್ರೀ ಜಯತೀರ್ಥ ಸ್ತುತಿ, ಶ್ರೀ ರಘೂತ್ತಮ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರಗಳ ಪಾರಾಯಣ ಹಮ್ಮಿಕೊಳ್ಳಲಾಗಿದೆ.
ಅಜಿತ ಕುಲಕರ್ಣಿ, ಎಲ್.ಐ.ಜಿ. 223, 5ನೇ ಮುಖ್ಯ ರಸ್ತೆ, 10ನೇ ಅಡ್ಡ ರಸ್ತೆ, ನವನಗರ ಇವರ ನಿವಾಸದಲ್ಲಿ ಪಾರಾಯಣ ನಡೆಯಲಿದ್ದು, ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.