ರುಕ್ಮಿಣೀಶ ವಿಜಯ ಉಪನ್ಯಾಸ

Published on

ಧಾರವಾಡ: ತಾಲೂಕಿನ ಸತ್ತೂರು ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ರಮೇಶ ಅಣ್ಣಿಗೇರಿ ಅವರ ನಿವಾಸದಲ್ಲಿ ಮೇ 25ರಂದು ಬೆಳಗ್ಗೆ 8ಕ್ಕೆ ಶ್ರೀ ರುಕ್ಮಿಣೀಶ ವಿಜಯ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಪಂ. ನಾರಾಯಣಾಚಾರ್ಯ ಪಾಂಡುರಂಗಿ ಅವರು ಉಪನ್ಯಾಸ ನೀಡುವರು.
ಮೊದಲು ಬಳಗದ ಸದಸ್ಯರಿಂದ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಲಿದೆ ಎಂದು ಬಳಗದ ಕಾರ್ಯದರ್ಶಿ ರಘೋತ್ತಮ ಅವಧಾನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net