ಪರವನಡ್ಕದಲ್ಲಿ ಜನಮೈತ್ರಿ ಪೊಲೀಸ್ ಸ್ನೇಹಸಂಗಮ

vrudhashrama
ಜನಮೈತ್ರಿ ಪೊಲೀಸ್ ಹಾಗೂ ಮೊಗ್ರಾಲಿನ ಕುನ್ನಿಲ್ ಬ್ರದರ್ಸ್ ಸಂಸ್ಥೆಯಿಂದ ಪರವನಡ್ಕದ ವೃದ್ಧಾಶ್ರಮದಲ್ಲಿ ‘ಸ್ನೇಹಸಂಗಮ’ಕಾರ್ಯಕ್ರಮ ಆಯೋಜಿಸಲಾಯಿತು.
Published on

ಕಾಸರಗೋಡು: ಜನಮೈತ್ರಿ ಪೊಲೀಸ್ ಹಾಗೂ ಮೊಗ್ರಾಲ್‌ಪುತ್ತೂರು ಕುನ್ನಿಲ್ ಬ್ರದರ್ಸ್ ಸಹಯೋಗದೊಂದಿಗೆ ಪರವನಡ್ಕದ ವೃದ್ಧಾಶ್ರಮದಲ್ಲಿ ಸ್ನೇಹಸಂಗಮ ಕಾರ್ಯಕ್ರಮ ನಡೆಯಿತು.

ವೃದ್ಧ ಸದನದ ಹಿರಿಯ ಸದಸ್ಯೆ ಲಕ್ಷ್ಮ್ಮಿಯಮ್ಮ ಅವರ ಸುಂದರ ಗೀತೆ ಮತ್ತು ಕುಟ್ಟಿಯಮ್ಮ ಅವರ ಕವನ ಗಮನ ಸೆಳೆಯಿತು. ತಮ್ಮ ಜೀವನದ ಒಳ್ಳೆ ದಿನಗಳಲ್ಲಿ ಪ್ರೀತಿಪಾತ್ರರಿಗಾಗಿ ಬೆವರು ಸುರಿಸಿರುವ ಅದೆಷ್ಟೋ ಮಂದಿ ಹಿರಿಯರು ತಮ್ಮ ಜೀವನದ ಸಂಧ್ಯಾಕಾಲಕ್ಕೆ ಬಂದಾಗ ಮನೆಯವರ ಮತ್ತು ಸಂಬಂಧಿಕರಿಂದ ನಿರ್ಲಕ್ಷೃಕ್ಕೊಳಗಾಗಿ ಇಂತಹ ವೃದ್ಧ ಸದನ ಸೇರಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಮಕ್ಕಳು ಅಥವಾ ಪ್ರೀತಿಪಾತ್ರರು ತಮ್ಮನ್ನು ವಾಪಾಸು ಕರೆದೊಯ್ಯಲು ಆಗಮಿಸುತ್ತಾರೆ ಎಂಬ ಆಶಾಭಾವನೆಯೊಂದಿಗೆ ಕಳೆಯುತ್ತಿರುವ ಇಲ್ಲಿನ ಹಿರಿಯ ಚೇತನಗಳಿಗೆ ಇಂತಹ ಸಂಘಟನೆಗಳು ಆಸರೆಯಾಗುತ್ತಿವೆ.

ಜನಮೈತ್ರಿ ಪೊಲೀಸ್ ಹಾಗೂ ಕುನ್ನಿಲ್ ಬ್ರದರ್ಸ್ ಸಂಘಟನೆ ಸದಸ್ಯರು ಹಾಡು, ಕವನ ವಾಚನದೊಂದಿಗೆ ಹಿರಿಯ ಜೀವಗಳನ್ನು ರಂಜಿಸಿದರು. ಅಧೀಕ್ಷಕ ನಿಶಾಂತ್, ಮಾಹಿನ್ ಕುನ್ನಿಲ್, ಶಾಹಿದ್ ಪುಳ್ಳಿ, ಜುಬೇರ್ ಕಾಯಿಕೋಟ್, ಜನಮೈತ್ರಿ ಪೊಲೀಸರಾದ ಸಂತೋಷ್, ಸೋನಿಯಾ ಚಂದ್ರನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net