ಈರುಳ್ಳಿ ಖರೀದಿಗೆ ರೈತರ ಪಟ್ಟು

P PURA AGRAHA 9 (1)
Published on

ಪರಶುರಾಮಪುರ: ಸರ್ಕಾರ ಪ್ರತಿ ಕ್ವಿಂಟಾಲ್ ಈರುಳ್ಳಿಗೆ 1600 ರೂ. ಬೆಂಬಲ ಬೆಲೆ ನೀಡಿ ಖರೀದಿಸಲು ಕ್ರಮಕೈಗೊಳ್ಳಬೇಕು ಎಂದು ಕೊರ‌್ಲಕುಂಟೆ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಸತತ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಲಭ್ಯ ನೀರಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಈರುಳ್ಳಿ ಬೆಳೆದಿದ್ದಾರೆ. ಆದರೆ, ಲಾಕ್‌ಡೌನ್‌ನಿಂದ ದರ ಕುಸಿದು ದಿಕ್ಕು ತೋಚದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಸಂಗ್ರಹಿಸಿಟ್ಟುಕೊಂಡಿರುವ ಈರುಳ್ಳಿ ದಾಸ್ತಾನು ಕೊಳೆಯಲಾರಂಭಿಸಿದೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ನೀಡಿ ಫಸಲು ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈರುಳ್ಳಿ ಬೆಳೆಗಾರರಾದ ಎಸ್.ಎಂ.ಚನ್ನಕೇಶ್ವರ, ಮಹಾಲಿಂಗಪ್ಪ, ನಾಗರಾಜ, ಈರಣ್ಣ, ದಿನೇಶಕುಮಾರ, ಬೊಮ್ಮಯ್ಯ, ಶಿವಮ್ಮ, ಚೈತ್ರಾ, ಶಿವಮ್ಮ, ಸಂಜನಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net