ಪೊಲೀಸರಷ್ಟೇ ಗೃಹರಕ್ಷಕರ ಸೇವೆಯೂ ಮುಖ್ಯ

P PURA SARKAAR 5
Published on

ಪರಶುರಾಮಪುರ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಷ್ಟೇ ಗೃಹರಕ್ಷಕರ ಸೇವೆಯೂ ಮುಖ್ಯ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠೆ ಸಿ.ಕೆ. ಸಂಧ್ಯಾ ತಿಳಿಸಿದರು.

ಗ್ರಾಮದ ಗೃಹರಕ್ಷಕದಳದ ಘಟಕಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸರ್ಕಾರ ನೀಡಿದ್ದ ಉಚಿತ ಶೂ, ಕ್ಯಾಪ್, ಪಾಲಿಶ್ ಇತರ ಪರಿಕರಗಳನ್ನು ಗೃಹ ರಕ್ಷಕರಿಗೆ ವಿತರಿಸಿ ಮಾತನಾಡಿದರು.

ಗೃಹರಕ್ಷಕರು ಸಾಮಾಜಿಕ ಬದಲಾವಣೆಗೆ ತಕ್ಕಂತೆ ಸರ್ಕಾರ ನೀಡುವ ತರಬೇತಿಗಳಲ್ಲಿ ಪಾಲ್ಗೊಂಡು ವೃತ್ತಿದಕ್ಷತೆ ಹೆಚ್ಚಿಸಿಕೊಳ್ಳಬೇಕು ಎಂದರು.

ಪರಶುರಾಮಪುರ ಹೋಬಳಿ ಗೃಹರಕ್ಷಕದಳದ ಘಟಕಾಧಿಕಾರಿ ಒ. ಚಿತ್ತಯ್ಯ ಮಾತನಾಡಿದರು.

ಪಿಎಸ್‌ಐ ಮಹೇಶ್ ಹೊಸಪೇಟೆ, ಜಿಲ್ಲಾ ಬೋಧಕ ಕೆ.ಎಚ್. ಲೋಕೇಶ್, ಸಹಾಯಕ ಬೋಧಕ ಜಿ. ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net