ಚೆಕ್‌ಪೋಸ್ಟ್ ಭದ್ರತಾ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ

P PURA SP 12
Published on

ಪರಶುರಾಮಪುರ: ಆಂಧ್ರ-ಕರ್ನಾಟಕ ಗಡಿಯಲ್ಲಿ ಬಿಗಿಭದ್ರತೆ ಕೈಗೊಂಡ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮೆಚ್ಚುಗೆ ವ್ಯಕ್ತಪಡಿಸಿದರು.

ಹೋಬಳಿಯ ಆಂಧ್ರ-ಕರ್ನಾಟಕ ಗಡಿ ಪ್ರದೇಶ ನಾಗಪ್ಪನಹಳ್ಳಿ ಗೇಟ್‌ನ ಚೆಕ್‌ಪೋಸ್ಟ್‌ಗೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ಭದ್ರತಾ ಕಾರ್ಯ ಪರಿಶೀಲಿಸಿ ಮಾತನಾಡಿದರು.

ಕರೊನಾ ವೈರಸ್ ತಡೆಗೆ ಗಡಿ ಗ್ರಾಮಗಳಲ್ಲಿ ಬಂದೋಬಸ್ತ್ ಮಾಡಲು ಸೂಚಿಸಲಾಗಿತ್ತು. ಈ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಮುಂದಿನ ಆದೇಶದ ವರೆಗೆ ಭದ್ರತೆ ಸಡಿಲಗೊಳ್ಳದಿರಲೆಂದು ಸಿಬ್ಬಂದಿಗೆ ಸೂಚಿಸಿದರು.

ಆಂಧ್ರ ಗಡಿಯ ಪರಶುರಾಮಪುರ, ಪಿ. ಮಹದೇವಪುರ, ಎಸ್. ದುರ್ಗ, ಕ್ಯಾದಿಗುಂಟೆ, ಜಾಜೂರು ಮತ್ತಿತರ ಗ್ರಾಮಗಳ ನಾಗರಿಕರು ಲಾಕ್‌ಡೌನ್ ಆದೇಶಕ್ಕೆ ಸಹಕರಿಸಬೇಕು. ಸ್ಥಳೀಯ ಆಡಳಿತ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಸೂಚಿಸಿದರು.

ಡಿವೈಎಸ್‌ಪಿ ರೋಷನ್ ಜಮೀರ್, ಸಿಪಿಐ ಇ. ಆನಂದಪ್ಪ, ಪಿಎಸ್‌ಐ ಮಹೇಶ ಹೊಸಕೋಟೆ, ಪಿಡಿಒ ಟಿ. ಮಲ್ಲೇಶಪ್ಪ, ವಿ.ಎ. ಚಂದ್ರಕಾಂತ, ಕರವಸೂಲಿಗಾರ ರಾಘವೇಂದ್ರ, ಸೋಮಶೇಖರ, ಚೆಕ್‌ಪೋಸ್ಟ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net