ಗಡಿ ಪ್ರದೇಶದಲ್ಲಿ ಸುರಕ್ಷತೆ ಕ್ರಮ

P PURA NP GATE 29
Published on

ಪರಶುರಾಮಪುರ: ಆಂಧ್ರ-ಕರ್ನಾಟಕ ರಾಜ್ಯ ಗಡಿ ಪ್ರದೇಶಗಳಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ತೆರೆದಿದ್ದು, ಜನರ ಸಹಕಾರ ಅಗತ್ಯ ಎಂದು ಎಸ್.ದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸುಶ್ರೂಷಕಿ ಜಯಲಕ್ಷ್ಮಿ ಮನವಿ ಮಾಡಿದರು.

ಸಮೀಪದ ನಾಗಪ್ಪನಹಳ್ಳಿಗೇಟ್ ಗ್ರಾಮದಲ್ಲಿನ ಹಿಂದೂಪುರ-ಚಿತ್ರದುರ್ಗ ಮುಖ್ಯರಸ್ತೆಯ ಎನ್.ಪಿ.ಗೇಟ್‌ನಲ್ಲಿ ಆರೋಗ್ಯ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಕಿರಿಯ ಆರೋಗ್ಯ ಸುಶ್ರೂಷಕಿ ಜ್ಯೋತಿ ಮಾತನಾಡಿ, ಅಗತ್ಯ ವಸ್ತು ಖರೀದಿಗೆ ಬರುವರು ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ಆರಕ್ಷಕ ರಾಜು, ಗೃಹರಕ್ಷಕ ಪ್ರಕಾಶ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀದೇವಿ, ಗುರುಪ್ರಸಾದ್, ರಾಮಕೃಷ್ಣಪ್ಪ, ಪ್ರಹ್ಲಾದ, ಹನುಮಂತರಾಯ, ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net