ನೀರಿನ ತೊಟ್ಟಿ ನಿರ್ಮಾಣಕ್ಕೆ ಸೂಚನೆ

RAGHUMURTHY T MLA
Published on

ಪರಶುರಾಮಪುರ: ಗ್ರಾಮದ ಮುಖ್ಯ ವೃತ್ತದಲ್ಲಿನ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಕೂಡಲೇ ತುಂಗಭದ್ರಾ ಹಿನ್ನೀರು ಯೋಜನೆಯಡಿ 1.20 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ತೊಟ್ಟಿ ನಿರ್ಮಿಸಿ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂ ಕಾರ್ಯಾಲಯದಲ್ಲಿ ಈಚೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿದ ವೇಳೆ ಮಾತನಾಡಿ, ಟ್ಯಾಂಕ್ ಕುರಿತು ವಿಜಯವಾಣಿ ವರದಿ ಮಾಡಿದ್ದನ್ನು ಪ್ರಸ್ತಾಪಿಸಿದ ಶಾಸಕರು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆಯ ಎಇಇ ಕಾವ್ಯಾ ಮಾತನಾಡಿ, ಗ್ರಾಮ ಸೇರಿ ವಿವಿಧೆಡೆ ತೊಟ್ಟಿ, ಮೇಲ್ತೊಟ್ಟಿಗಳನ್ನು ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಪಿಡಿಒ ಜಿ.ನಾಗರಾಜು, ಕಂದಾಯ ಇಲಾಖೆ ಪ್ರಭಾರ ನಿರೀಕ್ಷಕ ಹಿರಿಯಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಪಂ ಕೆಡಿಪಿ ಸದಸ್ಯ ಜಯವೀರಾಚಾರಿ, ಮುಖಂಡರಾದ ಗುಜ್ಜಾರಪ್ಪ, ಎಸ್.ಚನ್ನಕೇಶವ, ಆರ್‌ಐ ಹಿರಿಯಪ್ಪ, ವಿಎ ಶಿವಕುಮಾರ, ವೈದ್ಯ ಡಾ.ರಮೇಶ, ಅನಸೂಯಮ್ಮ, ಮಂಜುನಾಥ, ಮುಖಂಡರಾದ ನಾಗಭೂಷಣ, ತಿಮ್ಮಯ್ಯ, ನಾಗರಾಜು, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net