ರಾಮಾನುಜಾಚಾರ್ಯರ ಜಯಂತಿ ಮುಂದೂಡಿಕೆ

P PURA RAMANUJAA 26 (1)
Published on

ಪರಶುರಾಮಪುರ: ಗ್ರಾಮದ ಶ್ರೀ ಲಕ್ಷ್ಮೀಚನ್ನಕೇಶವಸ್ವಾಮಿ ದೇವಸ್ಥಾನ ಆವರಣದಲ್ಲಿ ಏ.28ರ ಮಂಗಳವಾರ ನಡೆಯಬೇಕಿದ್ದ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಲಾಕ್‌ಡೌನ್ ಮತ್ತು ಕರ್ಪ್ಯೂ ಜಾರಿ ಕಾರಣ ಮುಂದೂಡಲಾಗಿದೆ.

ಈ ಹಿಂದೆ ನಡೆದ ಸಮಿತಿ ಸಭೆಯಲ್ಲಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿತ್ತು. ಸರ್ಕಾರದ ಆದೇಶ ಪಾಲನೆ ಎಲ್ಲರ ಜವಾಬ್ದಾರಿ ಆದ ಕಾರಣ ಈ ಕಾರ್ಯ ಮುಂದೂಡಲಾಗಿದೆ. ಭಕ್ತರು ಮನೆಯಲ್ಲೇ ಶ್ರೀಸ್ವಾಮಿಯನ್ನು ಆರಾಧಿಸಬೇಕು. ಮುಂದಿನ ಜಯಂತಿ ದಿನಾಂಕವನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಎಸ್.ಎಚ್.ಸತ್ಯನಾರಾಯಣಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net