ರೋಗಿಗಳಿಗೆ ಅಗತ್ಯ ಪರಿಕರ ವಿತರಣೆ

P PURA SARKAAR 17 (3)
Published on

ಪರಶುರಾಮಪುರ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಒಳ-ಹೊರ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಶುಕ್ರವಾರ ಚಳ್ಳಕೆರೆ ತಾಲೂಕು ಪಂಚಾಯಿತಿ ವತಿಯಿಂದ ಹಣ್ಣು, ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿ, ಲಾಕ್‌ಡೌನ್‌ನಿಂದ ರೋಗಿಗಳು, ಅಶಕ್ತರಿಗೆ ಹಣ್ಣು-ತರಕಾರಿ ಲಭ್ಯವಾಗುತ್ತಿಲ್ಲ ಎಂಬ ದೂರಿನ ಮೇರೆಗೆ ಅಗತ್ಯ ವಸ್ತುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಮುಖಂಡ ಎನ್.ನಾಗಭೂಷಣ, ಲ್ಯಾಬ್‌ಟೆಕ್ನೀಷಿಯನ್ ವೀರೇಂದ್ರ, ಆಸ್ಪತ್ರೆ ಸಿಬ್ಬಂದಿ ಸಚಿನ್, ಸ್ಟಾಪ್‌ನರ್ಸ್ ಮಂಜುಳಾ, ತಿಪ್ಪೇಸ್ವಾಮಿ, ಕರಿಯಣ್ಣ, ಚಂದ್ರಣ್ಣ, ವಾಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net