

ಪರಶುರಾಮಪುರ: ಗ್ರಾಮ ದೇವತೆ ಲಕ್ಷ್ಮೀ ಕೊಲ್ಲಾಪುರದಮ್ಮ ದೇವಿಯ ನೂತನ ಪಂಚಲೋಹದ 110 ಕೆಜಿ ತೂಕದ ದೇವಿಯ ಮೂರ್ತಿ ಮೆರವಣಿಗೆ ಶುಕ್ರವಾರ ಗ್ರಾಮದಲ್ಲಿ ಜರುಗಿತು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಗೋವಿಂದಪ್ಪ, ಕಾಟಯ್ಯ, ತಿಪ್ಪೇಸ್ವಾಮಿ, ಬೊಮ್ಮಕ್ಕ, ದೇವಸ್ಥಾನ ಸಮಿತಿ ಅಧ್ಯಕ್ಷ ಕಲ್ಲೇಶಗೌಡ, ಪದಾಧಿಕಾರಿಗಳಾದ ತಿಮ್ಮಯ್ಯ, ರಂಗಪ್ಪ, ನಿಜಲಿಂಗಪ್ಪ, ಚನ್ನಕೇಶವ, ಹೊರಕೇರಿ ಕೇಶವ, ಲಕ್ಷ್ಮಣಪ್ಪ, ನರಸಿಂಹಪ್ಪ, ಜೆ.ಓ.ಚನ್ನಕೇಶವ, ನಾಗರಾಜು, ನಾಗಭೂಷಣ, ಪ್ರಕಾಶ, ಬಸವರಾಜು, ಆಂಜನೇಯ, ದುರುಗಪ್ಪ, ವೆಂಕಟೇಶ ಇದ್ದರು.