ಪರಿಸರ ಸಂರಕ್ಷಣೆಗೆ ಆದ್ಯತೆ

P PURA ANILA 17 (2)
Published on

ಪರಶುರಾಮಪುರ: ಪ್ರತಿ ಹಳ್ಳಿಗಳಿಗೂ ಸಮರ್ಪಕ ಅಡುಗೆ ಅನಿಲ ಪೂರೈಸಿ ಪರಿಸರ ಸಂರಕ್ಷಣೆ ಮಾಡುವುದು ಸರ್ಕಾರಗಳ ಉದ್ದೇಶವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸಮೀಪದ ಬೆಳಗೆರೆ ಗ್ರಾಮದಲ್ಲಿ ಬುಧವಾರ ಸಿಲಿಂಡರ್ ವಿತರಣಾ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಜರು ಅಡುಗೆ ತಯಾರಿಸಲು ಕಟ್ಟಿಗೆಯನ್ನೇ ಬಳಸುತ್ತಿದ್ದರು. ಇದರಿಂದ ಪರಿಸರ ಮಾಲಿನ್ಯವುಂಟಾಗಿ ಜೀವಿಗಳಿಗೆ ತೊಂದರೆಯಾಗುತ್ತಿತ್ತು. ಪ್ರಸ್ತುತ ಸರ್ಕಾರ ಎಲ್ಲ ವರ್ಗದವರಿಗೂ ಅಡುಗೆ ಅನಿಲದ ಸೌಲಭ್ಯ ನೀಡುತ್ತಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ ಮಾತನಾಡಿ, ಚಳ್ಳಕೆರೆ-ಪರಶುರಾಮಪುರದಿಂದ ದೂರವಿರುವ ಬೆಳಗೆರೆಯಲ್ಲಿ ಗ್ಯಾಸ್ ಸೇವಾ ಕೇಂದ್ರದ ಅವಶ್ಯಕತೆಯಿತ್ತು. ಈ ಕಾರಣಕ್ಕೆ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ, ವಿಎಸ್‌ಎಸ್‌ಎನ್ ಅಧ್ಯಕ್ಷ ತಿಪ್ಪೀರಯ್ಯ, ಸದಸ್ಯರಾದ ಕೆ.ಟಿ.ನಿಜಲಿಂಗಪ್ಪ, ಗೋಪಾಲಯ್ಯ, ಕೆ.ರಾಜಣ್ಣ ದೊಡ್ಡಲಿಂಗೇಗೌಡ್ರು, ಜಿ.ಟಿ.ತಿಪ್ಪೇಸ್ವಾಮಿ, ಜಿ.ಟಿ.ರಾಘವೇಂದ್ರ, ಟಿ.ಡಿ.ಎಲ್.ಗೌಡ್ರು, ಮಹಾಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net