

ಪರಶುರಾಮಪುರ: ಗ್ರಾಮದ ಹೊರವಲಯದ ಕೋಟೆಕೆರೆಯ ಬಳಿ ಶನಿವಾರ ಬೃಹತ್ ಬ್ಯಾರೇಜ್‌ಗೆ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಗ್ರಾಮದ ಮಹೇಶ, ಲಕ್ಷಿ ್ಮ ದಂಪತಿ ಮಗಳು ಮೋಕ್ಷಾ (9) ಮೃತ ಬಾಲಕಿ. ಇಬ್ಬರು ಮಕ್ಕಳು ಸಮೇತ ದಂಪತಿ ಕೋಟೆಕೆರೆಯ ಬ್ಯಾರೇಜ್ ನೋಡಲು ಹೋಗಿದ್ದರು. ಮಕ್ಕಳನ್ನು ಸೇತುವೆ ಮೇಲೆ ನಿಲ್ಲಿಸಿ ಈಜಾಡಲು ತೆರಳಿದ್ದರು.
ಸ್ವಲ್ಪ ಸಮಯದ ಬಳಿಕ ವಾಪಸ್ ಬಂದು ಹುಡುಕಾಟ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಯುವಕರು ಬ್ಯಾರೇಜ್‌ನಲ್ಲಿ ಹುಡುಕಿದಾಗ ಬಾಲಕಿ ಮೃತಪಟ್ಟಿದ್ದಳು. ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.