ದೇಶದ ಘನತೆ ಹೆಚ್ಚಿಸಿದ ವಿವೇಕರು

P PURA VIVEKA 17 (1)
Published on

ಪರಶುರಾಮಪುರ: ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಘನತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಸಾಧಕ ಎಂದು ಯುವಕ ಸಂಘದ ಅಧ್ಯಕ್ಷ ಜಿ.ರಾಜಪ್ಪ ಹೇಳಿದರು.

ಸಮೀಪದ ಮತ್ಸಮುದ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಯುವಕ ಸಂಘ, ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ವಿವೇಕಾನಂದರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಅವರ ವಿಚಾರಧಾರೆಗಳನ್ನು ಸಾರಬೇಕು ಎಂದರು.

ಉಪನ್ಯಾಸಕ ಸಿ.ನಾಗೇಂದ್ರಪ್ಪ ಮಾತನಾಡಿ, ಪ್ರಪಂಚದ ಎಲ್ಲ ದೇಶಗಳಲ್ಲೂ ಭಾರತದ ಆಧ್ಯಾತ್ಮ ಕುರಿತು ಪ್ರಶಂಸೆ ವ್ಯಕ್ತಪಡಿಸುವ ಜತೆಗೆ ನಮ್ಮಲ್ಲಿನ ಆಧ್ಯಾತ್ಮಿಕ ಹಾದಿಯತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಉಪನ್ಯಾಸಕ ಕರಡಪ್ಪ ಮಾತನಾಡಿ, ಹಿಂದು ಧರ್ಮವು ಪ್ರಪಂಚದ ಹಲವು ಧರ್ಮಗಳಲ್ಲೇ ಅತ್ಯಂತ ಶ್ರೀಮಂತವಾದುದು ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಸಂಘದ ಸದಸ್ಯರಾದ ಚಲ್ಮೇಶ, ರಘು, ಹಾಲೇಶ, ಮಹಾಂತೇಶ, ಟಿ.ಮಂಜು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net