ಗೋಮಾಳ ಜಾಗ ಒತ್ತುವರಿ ಪರಿಶೀಲನೆ

P PURA KANDAAYA 18 (1)
Published on

ಪರಶುರಾಮಪುರ: ಕೋಟೆಓಬಳಾಪುರ ಹೊರವಲಯದ ಗೋಮಾಳಕ್ಕೆ ಈಚೆಗೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ಸಿ.ಪರಮಶಿವಯ್ಯ ಸ್ಥಳ ಪರಿಶೀಲಿಸಿ, ತಹಸೀಲ್ದಾರ್‌ಗೆ ವರದಿ ನೀಡಿದ್ದಾರೆ.

ಕೆಲವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಈಚೆಗೆ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಸಿಬ್ಬಂದಿ ಸರ್ವೇ ನಡೆಸಿದರು. ಪ್ರಾಥಮಿಕ ವರದಿ ಪ್ರಕಾರ ಕೆಲವರು ಜಾಗ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಗ್ರಾಮ ಲೆಕ್ಕಾಧಿಕಾರಿ ಸಿ.ಪರಮಶಿವಯ್ಯ ತಿಳಿಸಿದರು.

ಗ್ರಾಪಂ ಸದಸ್ಯ ಪ್ರಮೋದ್, ಮಾಜಿ ಅಧ್ಯಕ್ಷ ಗೋವಿಂದಪ್ಪ, ಮಾಜಿ ಸದಸ್ಯ ಶಿವಾನಂದಪ್ಪ, ಮುಖಂಡರಾದ ಬಿ.ಟಿ.ಜಯಣ್ಣ, ಶಿವಕುಮಾರ, ಎಸ್.ಎಂ.ನಂಜುಂಡಪ್ಪ, ಗುರುಸ್ವಾಮಿ, ದಯಾನಂದಪ್ಪ, ಮಲ್ಲಿಕಾರ್ಜುನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net