ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬಿತ್ತಿ

P PURA SoLAAR CARR 20 (1)
Published on

ಪರಶುರಾಮಪುರ: ಜನಸಂಖ್ಯೆ ಹೆಚ್ಚಳದ ಕಾರಣ ಪರ್ಯಾಯ ಇಂಧನ ಕಂಡುಕೊಳ್ಳುವ ಅಗತ್ಯವಿದೆ ಎಂದು ವಿಜ್ಞಾನ ಶಿಕ್ಷಕ ನಾಗೊಂಡನಹಳ್ಳಿ ನಾಗರಾಜು ಹೇಳಿದರು.

ಸಮೀಪದ ಕರೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವೈಜ್ಞಾನಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಚಿಕ್ಕದೊಂದು ಸೋಲಾರ್ ಕಾರ್ ತಯಾರಿಸಲಾಗಿದೆ. ಇದು ಮಕ್ಕಳು ಹಾಗೂ ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿರುವುದು ಖುಷಿ ತಂದಿದೆ ಎಂದರು.

ಮಕ್ಕಳಲ್ಲಿ ಪಾಲಕರು, ಶಿಕ್ಷಕರು ಒಟ್ಟುಗೂಡಿ ವೈಜ್ಞಾನಿಕ ಚಿಂತನೆ ಬಿತ್ತುವ ಕಾರ್ಯ ಮಾಡಬೇಕು. ಇದರಿಂದ ಭವಿಷ್ಯದ ಬದುಕು ಭದ್ರವಾಗಲಿದೆ ಎಂದು ತೀಳಿಸಿದರು.

ಮುಖ್ಯಶಿಕ್ಷಕಿ ಜಬೀನಾ, ಗುರುಮೂರ್ತಿ, ಸಣ್ಣಿಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net