ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಇರಲಿ

P PURA ARANYAA 22 (1)
Published on

ಪರಶುರಾಮಪುರ: ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಅರಿವು ಅಗತ್ಯ ಎಂದು ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್. ಚನ್ನಕೇಶವ ಹೇಳಿದರು.

ವಿಶ್ವ ಅರಣ್ಯ ದಿನದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಹಾಗೂ ಅರಣ್ಯ ಇಲಾಖೆ ವತಿಯಿಂದ ಪಾವಗಡ ರಸ್ತೆಯ ಸರ್ವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನಲ್ಲಿ ಕಾಂಕ್ರಿಟ್ ಕಾಡುಗಳ ಹೆಚ್ಚಳದಿಂದ ಹವಾಮಾನ, ವಾಯುಗುಣದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿವೆ. ಇದಕ್ಕೆ ಪರಿಸರ ಸಂರಕ್ಷಣೆ ಒಂದೇ ಸೂಕ್ತ ಪರಿಹಾರವಾಗಿದ್ದು, ಈ ಕಾರ್ಯಕ್ಕೆ ಎಲ್ಲರೂ ಸನ್ನದ್ಧರಾಗಬೇಕು ಎಂದರು.

ಮುಖ್ಯಶಿಕ್ಷಕ ಶ್ರೀಶೈಲಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲಿಕ್ಕಾಗಿ ಶಾಲಾ-ಕಾಲೇಜು ಆವರಣದಲ್ಲಿ ಗಿಡ ನೆಟ್ಟು ಒಬ್ಬ ವಿದ್ಯಾರ್ಥಿಗೆ ಇಂತಿಷ್ಟು ಸಸಿಗಳನ್ನು ಹಂಚಿಕೆ ಮಾಡಿ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಕರಾದ ರಮೇಶ, ಮಂಜುನಾಥ, ಅಶ್ವಿನಿ, ದೀಪಾ, ವಿದ್ಯಾರ್ಥಿಗಳಾದ ಮಮತಾ, ರೂಪಾ, ಶ್ರೀದೇವಿ, ಶಿಲ್ಪಾ, ರತ್ನಾ, ಕಮಲಾ, ತಿಪ್ಪಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net