ಅಂಗವಿಕಲರಿಗೆ ಸಲಕರಣೆ ವಿತರಣೆ

P PURA ANGAVIKALA 18
Published on

ಪರಶುರಾಮಪುರ: ಟಿ.ಎನ್.ಕೋಟೆ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ 1.90 ಲಕ್ಷ ರೂ. ಅನುದಾನದಲ್ಲಿ ಅಗತ್ಯ ಸಾಧನ, ಸಲಕರಣೆ ವಿತರಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ ಹೇಳಿದರು.

ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಪಂ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನದ ಆಶಯದಂತೆ ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲು ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.

ತಾಪಂ ಸದಸ್ಯ ಕರಡಪ್ಪ ಮಾತನಾಡಿ, ತಾಪಂ ಅನುದಾನದಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ನಾಗೇಂದ್ರಪ್ಪ, ಗೀತಾವಾಣಿ, ಭಾಗ್ಯಾ, ಆರ್.ಟಿ.ನಿಂಗಣ್ಣ, ಬಸವರಾಜು, ಹನುಮಂತರಾಯ, ಪ್ರಮೋದ್, ಲಲಿತಾ, ಯರ‌್ರಮ್ಮ, ಚಂದ್ರಕಲಾ, ರಂಗಜ್ಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net