ಕರೊನಾಕ್ಕೆ ತಡೆ ಹಾಕಲು ಮನೆಯಲ್ಲಿರಿ

P PURA POLICE 5
Published on

ಪರಶುರಾಮಪುರ: ಕರೊನಾ ಹರಡುವಿಕೆಗೆ ಕಡಿವಾಣ ಹಾಕಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಚಳ್ಳಕೆರೆ ಪೊಲೀಸ್ ವೃತ್ತನಿರೀಕ್ಷಕ ಇ ಆನಂದಪ್ಪ ತಿಳಿಸಿದರು.

ಜಿಲ್ಲಾ ಪೊಲೀಸ್, ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕರ ಕಚೇರಿ, ಗ್ರಾಮದ ಆರಕ್ಷಕ ಠಾಣೆ ಹಾಗೂ ಸ್ಥಳೀಯ ಆಡಳಿತದ ವತಿಯಿಂದ ಗ್ರಾಮ ಆರಕ್ಷಕ ಠಾಣೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಜತೆಗೆ ಜನರಲ್ಲಿ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂತರ್ಜಾಲದ ಮೂಲಕ ಸಂದೇಶ ರವಾನಿಸಬೇಕು. ಸುಳ್ಳು ಸುದ್ದಿ ಹಬ್ಬಿಸದೆ ದೇಶದ ಹಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಿಎಸ್‌ಐ ಮಹೇಶ ಹೊಸಕೋಟೆ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ವಿವಿಧ ಗ್ರಾಪಂ ಅಧ್ಯಕ್ಷರಾದ ಎಂ.ಆರ್.ರುದ್ರೇಶ, ಬೊಮ್ಮಲಿಂಗಪ್ಪ, ಸರೋಜಾ, ಓ.ಬೈಲಪ್ಪ, ಎಲ್.ಸುರೇಶ, ಲಲಿತಾ, ಜಿಪಂ ಕೆಡಿಪಿ ಸದಸ್ಯ ಜಯವೀರಾಚಾರಿ, ಮುಖಂಡರಾದ ಗುಜ್ಜಾರಪ್ಪ, ನಾಗರಾಜು, ಚೌಳೂರು ಚಿಕ್ಕಣ್ಣ, ನಾಗರಾಜು, ಯರ‌್ರಜ್ಜ, ಗೋವಿಂದರಾಜು, ಪೇದೆಗಳಾದ ಶ್ರೀನಿವಾಸ, ರವಿ, ಮಹಾಂತೇಶ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net