

ಪರಶುರಾಮಪುರ: ಕ್ಷೇತ್ರದ ಅಭಿವೃದ್ಧಿ ಇತರೆ ಜಿಲ್ಲೆ, ಶಾಸಕರಿಗೆ ಮಾದರಿ ಆಗಿದೆ. ಆದರೂ ಕೆಲವರು ಅನಗತ್ಯ ಗೊಂದಲ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ ಆರೋಪಿಸಿದರು.
ಗ್ರಾಮದ ಮುಖ್ಯವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ವೇದಾವತಿ ನದಿಗೆ ವಿವಿ ಸಾಗರದ ನೀರು ಬಿಡುವಂತೆ ಜಿಲ್ಲಾಧಿಕಾರಿಯಲ್ಲಿ ಶಾಸಕರು ಮನವಿ ಮಾಡಿದ್ದು, ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು.
ಮೂರು ದೊಡ್ಡ ಬ್ಯಾರೇಜ್ ನಿರ್ಮಾಣ ಮೂಲಕ ಬಯಲುಸೀಮೆ ಜನರ ಜಲ ಸಮಸ್ಯೆಗೆ ಶಾಸಕರು ಈಗಾಗಲೇ ಸ್ಪಂದಿಸಿದ್ದಾರೆ. ವಿವಿ ಸಾಗರದಿಂದ ಅರ್ಧ ಟಿಎಂಸಿ ಅಡಿ ನೀರು ಹರಿದುಬರಲಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಹೇಳಿದರು.
ವೇದಾವತಿ ನದಿಗೆ ನೀರು ಬಿಡುವ ಮುನ್ಸೂಚನೆ ದೊರೆತಿರುವುದರಿಂದ ಕೆಲವರು ನಮ್ಮಿಂದ ಕಾರ್ಯ ಆಯ್ತು ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಗಿಮಿಕ್ ನಡೆಸುತ್ತಿದ್ದಾರೆ ಎಂದು ದೂರಿದರು.
ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಮಾಜಿ ಅಧ್ಯಕ್ಷ ಕಾಟಯ್ಯ, ಸದಸ್ಯೆ ಬಾಲನಾಗಮ್ಮ, ಮುಖಂಡರಾದ ಬಸವರಾಜು, ನಿಜಲಿಂಗಪ್ಪ, ಲಕ್ಷ್ಮಣಪ್ಪ, ತಿಪ್ಪೇಸ್ವಾಮಿ, ಆಂಜನೇಯ, ಪಿ.ಓ.ಪ್ರಕಾಶ, ನಿಜಲಿಂಗಪ್ಪ ಮತ್ತಿತರರು ಇದ್ದರು