

ಪರಶುರಾಮಪುರ: ಪಾವಗಡ ರಸ್ತೆಯ ಐತಿಹಾಸಿಕ ಹಳೇ ಕೆರೆ ಅಂಗಳದಲ್ಲಿ ಜಾಲಿ ಗಿಡ ಬೆಳೆದಿದ್ದು ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕ್ರಿ.ಶ.1123ರಲ್ಲಿ ನಿರ್ಮಾಣವಾದ ಈ ಕೆರೆ, 15 ವರ್ಷಗಳ ಸದಾ ಹಿಂದೆ ತುಂಬಿರುತ್ತಿತ್ತು. 12 ವರ್ಷಗಳ ಹಿಂದೆ ಕೆರೆಗೆ ಕಾಲುವೆ ನಿರ್ಮಿಸಲಾಗಿತ್ತಾದರೂ ಜಾಲಿ ತೆರವುಗೊಳಿಸಿರಲಿಲ್ಲ.
ಹತ್ತಾರು ಗ್ರಾಮಗಳಿಗೆ ಜೀವನಾಡಿಯಾಗಿದ್ದ ಕೆರೆ ಈಗ ಜೀವ ಕಳೆದುಕೊಂಡಿದ್ದು ಇದರ ನಿರ್ವಹಣೆ ಯನ್ನು ಗ್ರಾಪಂ ಗೆ ವಹಿಸಿಕೊಡಬೇಕು. ಇಲ್ಲವೇ ಕೆರೆಯಂಗಳ ಸ್ವಚ್ಛಗೊಳಿಸಿ ನೀರು ನಿಲ್ಲಲು ಅವಕಾಶ ಕಲ್ಪಿಸಲು ಮನವಿ ಮಾಡಲಾಗಿದೆ.
ನರೇಗಾದಡಿ ಈಚೆಗೆ ಜಾಲಿ ಗಿಡಗಳನ್ನು ತೆರವುಗೊಳಿಸಲಾಗಿದೆ. ಮತ್ತೊಮ್ಮೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು.
ಜಿ.ನಾಗರಾಜು
ಪಿಡಿಒ, ಪರಶುರಾಮಪುರ