

ಪರಶುರಾಮಪುರ: ಭಾರತೀಯ ಪರಂಪರೆಯಲ್ಲಿ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಪವಿತ್ರ ಸ್ಥಾನವನ್ನು ಪಡೆದಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ದೇವಸ್ಥಾನದ ಶಿಖರ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಐತಿಹಾಸಿಕ ವೇದಾವತಿ ನದಿ ಹಾಗೂ ಚೆಲುಮೇರುದ್ರಸ್ವಾಮಿ ಮಠವಿರುವ ನಾಗಗೊಂಡನಹಳ್ಳಿಗೆ ತನ್ನದೇ ಆದ ಇತಿಹಾಸವಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಭೀಮಕ್ಕ, ನಗರಸಭಾ ಸದಸ್ಯ ರಮೇಶಗೌಡ, ಮುಖಂಡರಾದ ನಾಗರಾಜು, ಮಂಜಣ್ಣ, ಮಂಜುನಾಥ, ಈರಣ್ಣ, ಚಲುಮೇಶ, ಮಹಾಂತೇಶ, ವೆಂಕಟೇಶ ಇದ್ದರು.