ದೇಗುಲಗಳಿಗೆ ವಿಶಿಷ್ಟ ಸ್ಥಾನ

P PURA KOLLAPURADAMMA 26 (2)
Published on

ಪರಶುರಾಮಪುರ: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳು, ಆಧ್ಯಾತ್ಮಿಕ ಕೇಂದ್ರಗಳಿಗೆ ವಿಶಿಷ್ಟ ಸ್ಥಾನವಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಉತ್ಸವದ ಅಂಗವಾಗಿ ಗ್ರಾಮದ ಲಕ್ಷ್ಮೀ ಕೊಲ್ಲಾಪುರದಮ್ಮ ದೇವಸ್ಥಾನದದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡುತ್ತಿರುವ ರಥದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ ಮಾತನಾಡಿದರು.

ಯುಗಾದಿ ವೇಳೆ ಗ್ರಾಮದಲ್ಲಿ ಏಳೆಂಟು ದಿನ ಕಾಲ ಉತ್ಸವ ಜರುಗುವ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಸಮಸ್ಯೆ ಆಗದಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ದೇವಸ್ಥಾನದ ಮಾರ್ಗದ ರಸ್ತೆಯಲ್ಲಿನ ವಿದ್ಯುತ್ ಕಂಬ ತೆರವುಗೊಳಿಸಬೇಕು ಎಂದು ಸೂಚಿಸಿದರು.

ದೇವಸ್ಥಾನದ ಪಕ್ಕದಲ್ಲೇ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಕಟ್ಟಡವಿದ್ದು ಕೆಒಎಫ್‌ನ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲು ಗ್ರಾಮದ ಚಳ್ಳಕೆರೆ ರಸ್ತೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಳಿ ನಿವೇಶನವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಒಎಫ್ ಅಧಿಕಾರಿ ಶ್ರೀನಿವಾಸ, ಕಾರ್ಯದರ್ಶಿ ಕರಿಯಣ್ಣ ಅವರಿಗೆ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಟಿ.ಗೋವಿಂದಪ್ಪ, ಕಾಟಪ್ಪ, ನಾಗರಾಜು, ದೇವಸ್ಥಾನ ಸಮಿತಿಯ ಅಧ್ಯಕ್ಷ ಕಲ್ಲೇಶಗೌಡ, ಪದಾಧಿಕಾರಿಗಳಾದ ಎಸ್.ಚನ್ನಕೇಶವ, ನಿಜಲಿಂಗಪ್ಪ, ಚನ್ನಕೇಶವಪ್ಪ, ತಿಮ್ಮಯ್ಯ, ಮಾರುತಿ, ಆಂಜನೇಯ, ಪಿಡಿಒ ಜಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net